Site icon PowerTV

ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಕಿಡಿಕಾರಿದ ಗೃಹ ಸಚಿವ ಆರಗ ಜ್ಞಾನೇಂದ್ರ..!

ಬೆಂಗಳೂರು: ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರ, ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದದ್ದಾರೆ. ಇದು ಆಚ್ಚರಿ ಏನು ಇಲ್ಲ.ಕಾಂಗ್ರೆಸ್ ನವರ ನಡುವಳಿಕೆಯೇ ಇದು ಎಂದು ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವ ಹಾಗೂ ಬಂದ ನಂತರವೂ ಮುಸ್ಲಿಂರಿಗೆ ದೇಶ ಒಡೆದು ಕೊಟ್ಟವರು ಇವರು. ಮುಸ್ಲಿಂರನ್ನು ತುಷ್ಟಿಕರಣ ಮಾಡಿ, ಹಿಂದು ಮುಸ್ಲಿಂ ಒಟ್ಟಿಗೆ ಬದುಕದ ರೀತಿಯಲ್ಲಿ ಮಾಡಿದ್ದಾರೆ.

ಆದ್ದರಿಂದ ಮುಸ್ಲಿಂ ತುಷ್ಠಿಕರಣದ ಒಂದು ಭಾಗದ ಸತೀಶ್ ಜಾರಕಿಹೊಳಿ ಹಾಗಾಗಿ ಇದರಲ್ಲಿ ಅಚ್ಚರಿ ಏನು ಇಲ್ಲ.
ಹಿಂದೂ ವಿರೋಧಿ ಆ ಪಕ್ಷದು ಇದೆ‌. ಇದಕ್ಕಾಗಿ ಸಾಕಷ್ಟು ಹಾನಿ ಅನುಭವಿಸಿದೆ. ಸುರ್ಜೇವಾಲ ಖಂಡನೆ ವಿಚಾರ, ತೊಟ್ಟಿಲು ತೂಗೊದು ಅವರೇ, ಮಗುವನ್ನು ಚೂಟೋದು ಅವರೇ.

ಮಸೀದಿಗೆ ಹೋಗಿ ಕರ್ಚಿಫ್ ಹಾಕಿ ಕುಳಿತುಕೊಳ್ಳುವವರು. ಈಗ ದೇವಸ್ಥಾನ ಓಡಾಡುತ್ತಿದ್ದಾರೆ. ಗಂಗಾ ನದಿಗೆ ಹೋಗಿ ಸ್ನಾನ ಮಾಡ್ತಾರೆ. ಈಗಾಗಿ ಹಿಂದೂಗಳನ್ನು ಓಲೆಸಬೇಕು, ಮುಸ್ಲಿಂ ಅವರನ್ನು ಓಲೆಸಬೇಕು ಎಂದು ಹೇಳಿದ್ದಾರೆ.

Exit mobile version