Site icon PowerTV

ಈ ಬಾರಿ ಯಾರ ಪಾಲಾಗುತ್ತೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟೆಕೆಟ್…?

ಕೊಪ್ಪಳ:ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳ ಕಸರತ್ತು ನಡೆಸಿದ್ದಾರೆ. ಕೊಪ್ಪಳದ ಕನಕಗಿರಿ ಕ್ಷೇತ್ರದಲ್ಲಿ ಹನುಮನ ಬಾಲದಂತಾದ ಆಕಾಂಕ್ಷಿಗಳ ಪಟ್ಟಿ.

ಬಿಜೆಪಿಯಿಂದ ಈ ಬಾರಿ ಹಾಲಿ ಶಾಸಕ ಬಸವರಾಜ ದಢೇಸುಗೂರುಗೆ ಟಿಕೆಟ್ ಕೈತಪ್ಪೋ ಸಾಧ್ಯತೆ, ಬಿಜೆಪಿಯಲ್ಲಿ ಕನಕಗಿರಿ ಕ್ಷೇತ್ರಕ್ಕೆ ಟಿಕೆಟ್ ಗಿಟ್ಟಿಸಲು ಅನೇಕರ ಕಸರತ್ತು ನಡೆಸಿದ್ದಾರೆ. ಬಿಜೆಪಿಯಲ್ಲಿ ಗಾಯಿತ್ರಿ ತಿಮ್ಮಾರೆಡ್ಡಿ, ಪುಷ್ಪಾಂಜಲಿ ಗುನ್ನಾಳ, ಈಶಪ್ಪ ಹಿರೇಮನಿ, ಪಿ.ವಿ. ರಾಜಗೋಪಾಲ್, ಧರ್ಮಾಣ್ಣ ಡಿಎಂ. ಯಿಂದ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ.

ಬಿಜೆಪಿಗೆ ಸಂಕಷ್ಟ ತಂದೊಡ್ಡಿದ್ದ ಶಾಸಕ ಬಸವರಾಜ ಅವರ ಮಹಿಳೆ ಜೊತೆ ಸಂಭಾಷಣೆ ಆಡಿಯೋ ಹಾಗೂ ಪಿಎಸ್ ಐ ಕುರಿತಾದ ಹಣದ ಆಡಿಯೋ ಟೇಪ್. ಈ ಹಿನ್ನೆಲೆಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಸಾಧ್ಯತೆಯಿದೆ. ಇನ್ನು
ಕ್ಷೇತ್ರದ ರಾಜಕೀಯ ವಲಯದಲ್ಲಿ ಕೆ.ಎಸ್. ರತ್ನಪ್ರಭಾ ಹೆಸರು ಸಹ ಕೇಳಿ ಬರುತ್ತಿದೆ.

Exit mobile version