Site icon PowerTV

ಚಾಮರಾಜನಗರ: ಸತತ ಹೋರಾಟದಿಂದ ಮೀಸಲಾತಿ ಹೆಚ್ಚಳವಾಗಿದೆ..!

ಚಾಮರಾಜನಗರ: ಚಾಮರಾಜನಗರದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿಕೆ ನೀಡಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಮಾನ್ಯ ಮಾಡಿರುವ ಸುಪ್ರೀಂ ತೀರ್ಪಿಗೆ ಸ್ವಾಗತ.

ಬ್ರಾಹ್ಮಣರಾದಿಯಾಗಿ ಈಗ ಎಲ್ಲರೂ ಮೀಸಲಾತಿ ಅಡಿ ಬಂದಿದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂಬುದೇ ನಮ್ಮ ಅಗ್ರಹ. ಶೇ.10 ರಷ್ಟು ಮೀಸಲಾತಿ ಮಾನ್ಯ ಮಾಡಿರುವುದರಿಂದ ಎಸ್ಸಿ ಎಸ್ಟಿಗೆ ಕೊಟ್ಟಿರುವ ಮೀಸಲಾತಿ ಅಮಾನ್ಯವಾಗುವುದಿಲ್ಲ.

ಕೆಲವರು ಹೇಳುತ್ತಿದ್ದ ಮೀಸಲಾತಿ ವಿಚಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪೇ ಉತ್ತರ.ಚಾಮರಾಜನಗರದಲ್ಲಿ ಎಸ್ಸಿ-ಎಸ್ಟಿ ಒಗ್ಗಟ್ಟು ಪ್ರದರ್ಶನ. ಮುಂದಿನ ಬಾರಿ ಎಸ್ಸಿ ಇಲ್ಲವೇ ಎಸ್ಟಿ ಸಿಎಂ ಆಗಬೇಕು. ಸತತ ಹೋರಾಟದಿಂದ ಮೀಸಲಾತಿ ಹೆಚ್ಚಳವಾಗಿದೆ ಅದೇ ರೀತಿ ಮುಂದಿನ ಬಾರಿ ಎಸ್ಸಿ ಇಲ್ಲವೇ ಎಸ್ಟಿ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಲೇಬೇಕು. ಮೈಸೂರಿನ‌ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿಕೆ ನಿಡಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮಗೆ ಆಳುವ ಅಧಿಕಾರ ಕೊಟ್ಟಿಲ್ಲ.

ಎಸ್ಸಿ ಹಾಗೂ ಎಸ್ಟಿ ಒಂದಾಗಿದ್ದರಿಂದಲೇ ಮೀಸಲಾತಿ ಸಿಕ್ಕಿತು. ಸ್ವಾಮೀಜಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಒಗ್ಗಟ್ಟು ಪ್ರದರ್ಶನ ಮಾಡಲಿದ್ದೇವೆ. ಮುಂದಿನ ಬಾರಿ ಎಸ್ಸಿ ಇಲ್ಲವೇ ಎಸ್ಟಿ ಸಿಎಂ ಆಗುವಂತೆ ಮಾಡುತ್ತೇವೆ. ಈಗಾಗಲೇ ಹಲವು ಬಾರಿ ವಂಚಿತರಾಗಿದ್ದು ಈ ಬಾರಿ ಇದಾಗಬಾರದು ಎಂದು ಹೇಳಿದ್ದಾರೆ.

Exit mobile version