Site icon PowerTV

ಕಮಲ ಪಾಳಯದ ವಿರುದ್ಧ ವಾಗ್ವಾದಕ್ಕಿಳಿದ ಡಿಕೆಶಿ

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನಿಡಿದ್ದು, ಭಾರತ ಜೋಡೋ ಯಾತ್ರೆಯಿಂದ ಬಿಜೆಪಿಗರಿಗೆ ಭಯ ಶುರುವಾಗಿದೆ. ಭಾರತ ಚೋಡೋ ಗಾಂಧೀಜಿ ಮಾಡಿದ ಯಾತ್ರೆ, ಮೋದಿ ರವರು ಭಾರತ ತೋಡೋ ಮಾಡತ್ತಿದ್ದಾರೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ.

ಜನ ನಮಗೆ ಪ್ರೀತಿ, ವಿಶ್ವಾಸ ತೋರಿಸಿದ್ದಾರೆ. ಸತೀಶ್ ಜಾರಕಿಹೊಳಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ನಾವು ಮತ್ತು ಕಾಂಗ್ರೆಸ್ ಪಕ್ಷ ಅವರ ಹೇಳಿಕೆಯನ್ನ ಒಪ್ಪೋದಿಲ್ಲ.ನಮ್ಮ ಸಂಸ್ಕೃತಿ ಎಲ್ಲ ಧರ್ಮ, ಜಾತಿ ಒಟ್ಟಿಗೆ ತೆಗೆದುಕೊಂಡು ಹೋಗುವುದು.

ನಾನು ಒಬ್ಬ ಹಿಂದೂ ಧರ್ಮದವನು, ಧರ್ಮಕ್ಕೆ ನಮ್ಮದೇ ಆದ ಇತಿಹಾಸವಿದೆ. ಸತೀಶ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗೋದಿಲ್ಲ. KPCC ಇಂದ ಈ ಬಗ್ಗೆ ಸ್ಪಷ್ಟನೆ ಪಡೆಯುತ್ತೇವೆ. ಸಾರ್ವಜನಿಕ ಬದುಕಿನಲ್ಲಿ ಈ ರೀತಿ ಹೇಳಿಕೆ ನೀಡುವುದು ಖಂಡನೀಯ.
ಬೀದಿ ಬಟಿ ವ್ಯಾಪಾರಸ್ಥರಿಂದ ಬೈರತಿ ಬಸವರಾಜ ಕಮೀಷನ್ ಪಡೆದ ಆರೋಪ ಕೇಳಿಬಂದಿದೆ. ಸರ್ಕಾರ ನಿಂತಿರುವುದೇ ಕಮಿಷನ್ ಮೇಲೆ. ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಉತ್ತರ ಕೊಡಬೇಕು. ಬೀದಿ ಬದಿ ವ್ಯಾಪಾರಿಗಳಿಂದಲೂ ಹಣ ಪಡೆಯುವ ಮಟ್ಟಕ್ಕೆ ಸರ್ಕಾರ ಬಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.

Exit mobile version