Site icon PowerTV

ಟ್ವೀಟ್ ಮೂಲಕ ಕೈ ಪಾಳಯದವರನ್ನು ಕೆಣಕಿದ ಬಿಜೆಪಿ..!

ಬೆಂಗಳೂರು:ಡಿಕೆ vs ಸಿದ್ದು ಅಸ್ತ್ರವನ್ನು ಪ್ರಯೋಗಿಸಿದ ಬಿಜೆಪಿ ಪಕ್ಷ. ಎವರ್ಗ್ರೀನ್ ಬಾಲಕ ಸಿದ್ದರಾಮಯ್ಯ ಎಂದು ಟ್ವೀಟ್ ಮೂಲಕ ನೀವು ಒಂದು ಕ್ಷೇತ್ರ ಹುಡುಕಿಕೊಳ್ಳಿ ಎಂದು ಸಿದ್ದರಾಮಯ್ಯಗೆ ಬಿಜೆಪಿಸಲಹೆ ನೀಡಿದ . ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದ ಕಮಲ ಪಾಳಯ.

ಕಾಂಗ್ರೆಸ್ಸಿನ ಎವರ್ ಗ್ರೀನ್ ಬಾಲಕ ಸಿದ್ದರಾಮಯ್ಯ & ಡಿಕೆ ಶಿವಕುಮಾರ್ ಅವರನ್ನು ಒಗ್ಗೂಡಿಸಲು ಮಾಡಿದ ಎಲ್ಲಾ ಕಸರತ್ತುಗಳು ವಿಫಲವಾಗಿದೆ.ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಂತೆ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಗರು ಜೊತೆಯಾಗಿ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಜನ ಸಂಕಲ್ಪ ಯಾತ್ರೆಗೆ ರಾಜ್ಯಾದಾದ್ಯಂತ ಸಿಗುತ್ತಿರುವ ಜನ ಬೆಂಬಲದಿಂದ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ.

ರಾಹುಲ್ ಗಾಂಧಿ ಸಹಿತ ಯಾರಿಂದಲೂ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಜೋಡಿಸಲು ಸಾಧ್ಯವಿಲ್ಲ. ಇವರಿಬ್ಬರು ಒಂದಾಗಲು ಕುರ್ಚಿಯ ಆಸೆ ಬಿಡಬೇಕು. ಸಿದ್ದರಾಮಯ್ಯ ನಿಮ್ಮಿಂದ ಸಿಎಂ ಕುರ್ಚಿ ಆಸೆ ಬಿಡಲು ಸಾಧ್ಯವೇ?ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ.

ಸಿದ್ದರಾಮಯ್ಯನವರೇ, ನೀವು ಅಧಕಾರಕ್ಕೆ ಬರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು, ನಿಮಗಾಗಿ ಒಂದು ಕ್ಷೇತ್ರವನ್ನು ಮೊದಲು ಅಂತಿಮಗೊಳಿಸಿ. ನೀವೆಲ್ಲೇ ಸ್ಪರ್ಧಿಸಿದರೂ ಪರಮೇಶ್ವರ್‌, ಖರ್ಗೆ, ಡಿಕೆಶಿ ನಿಮಗೆ ಖೆಡ್ಡಾ ತೋಡುವುದು ಖಚಿತ. ಎಂದು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ.

Exit mobile version