Site icon PowerTV

ಅದಿತಿ ಮದುವೆ ಗಣ್ಯರಿಗೆ ಆಮಂತ್ರಣ

ಕನ್ನಡದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಇದೇ ತಿಂಗಳು 27ರಂದು ಯಶಸ್ವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸದ್ಯ ಮದುವೆ ತಯಾರಿಯಲ್ಲಿ ಬ್ಯುಜಿಯಾಗಿರುವ ನಟಿ, ಖುದ್ದು ತಾವೇ ಹೋಗಿ ರಾಜಕೀಯ ಗಣ್ಯರಿಗೆಲ್ಲ ಮದುವೆ ಆಮಂತ್ರಣ ನೀಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೂ ನಟಿ ಅದಿತಿ ಪ್ರಭುದೇವ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ತಮ್ಮ ಮದುವೆಗೆ ಆಗಮಿಸುವಂತೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪಗೆ ನಟಿ ಅದಿತಿ ಮತ್ತು ಯಶಸ್ವಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ತಮ್ಮ ಮದುವೆಗೆ ಆಗಮಿಸುವಂತೆ ನಟಿ ಅದಿತಿ ಮತ್ತು ಯಶಸ್ವಿ ಮದುವೆ ಪತ್ರಿಕೆ ನೀಡಿದ್ದಾರೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ನಟಿ ಅದಿತಿ ಮದುವೆ ಇನ್ವಿಟೇಷನ್​ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ ದಂಪತಿಗೂ ಮದುವೆ ಆಹ್ವಾನ ನೀಡಿದ್ದಾರೆ.

Exit mobile version