Site icon PowerTV

ಮುರುಘಾ ಮಠದಲ್ಲಿನ 47 ಫೋಟೋ ಕಳವು ಕೇಸ್​; ಇಬ್ಬರ ಬಂಧನ

ಚಿತ್ರದುರ್ಗ; ಚಿತ್ರದುರ್ಗದ ಮುರುಘಾ ಮಠದ 47 ಫೋಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರ ಬಂಧನ ಮಾಡಿದ್ದಾರೆ.

ಕಳೆದ ಅಕ್ಟೋಬರ್ 6 ರಂದು ಮುರುಘಾ ಮಠದಿಂದ 47 ಫೋಟೋ ಕಳವಾಗಿದ್ದವು. ಇಬ್ಬರು ಕಳವು ಮಾಡುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಈಗ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಅವರು ಇಬ್ಬರು ಆರೋಪಿಗಳ ಬಂಧಿಸಿದ್ದಾರೆ.

ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ್ ಮೂರ್ತಿ, ಎಸ್.ಜೆ.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಶಿವನಂದಸ್ವಾಮಿ ಬಂಧಿತರಾಗಿದ್ದು, ವಿವಿಧ ಗಣ್ಯರ ಜೊತೆಯಾಗಿದ್ದ ಮುರುಘ ಮಠದ ಶಿವಮೂರ್ತಿಯ ಪೋಟೋ ಕಳವು  ಮಾಡಿದ್ದರು.

ಸದ್ಯ ಈ ಇಬ್ಬರಲ್ಲಿ ಮೋಹನ್​ ಪೊಲೀಸರು ಬಂಧಿಸಿದ್ದು, ಮತ್ತೊರ್ವ ಆರೋಪಿ ಶಿವನಂದಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Exit mobile version