Site icon PowerTV

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ

ಜಮ್ಮು ಕಾಶ್ಮೀರದಲ್ಲಿ ಹಿಮಪಾತ ಉಂಟಾಗಿದೆ. ಜನವಸತಿ ಪ್ರದೇಶಗಳು, ರಸ್ತೆಗಳು ಎಲ್ಲಾ ಪ್ರದೇಶಗಳು ಹಿಮ ಆವರಿಸಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಇದ್ರಿಂದಾಗಿ ಹಿಮಪಾತ ಆರಂಭವಾಗಿದೆ. ರಸ್ತೆಗಳ ಮೇಲೆ ಹಿಮ ಬಿದ್ದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಗಳ ಮೇಲೆ ಬಿದ್ದ ಹಿಮವನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದ ದ್ರಾಸ್​​​​ನಲ್ಲಿನ ಹಿಮಪಾತದ ದೃಶ್ಯ ವೈರಲ್ ಆಗಿದ್ದು, ನೋಡುಗರನ್ನು ಸೆಳೆಯುತ್ತಿದೆ. ಆದರೆ ಅಲ್ಲಿಮ ನಿವಾಸಿಗಳಿಗೆ ಇದು ಫಜೀತಿ ತಂದೊಡ್ಡಿದೆ. ಇಲ್ಲಿ ಹಿಮಪಾತ ಉಂಟಾಗುವುದರಿಂದ ನವೆಂಬರ್ 11 ರಿಂದ ಹರಿಯಾಣ, ಪಂಜಾಬ್, ದೆಹಲಿ, ರಾಜಸ್ಥಾನ, ಉತ್ತರಪ್ರದೇಶದ ತಾಪಮಾನದಲ್ಲಿ ಇಳಿಕೆಯಾಗಲಿದೆ.

Exit mobile version