Site icon PowerTV

ಜಮೀರ್ ಪುತ್ರನ ‘ಬನಾರಸ್’ ಚಿತ್ರ ವೀಕ್ಷಿಸಿದ ಸಿದ್ದರಾಮಯ್ಯ

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ನಟಿಸಿರುವ ಬನಾರಸ್ ಸಿನಿಮಾ ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ದರಾಮಯ್ಯ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ವೀಕ್ಷಣೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಬನಾರಸ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಝೈದ್ ಖಾನ್ ಹಾಗೂ ಸೋನಲ್‌ ಮಾಂಟೇರೋ ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದರು.

ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂತಹ ಚಿತ್ರಗಳ ಸಂಖ್ಯೆ ನೂರಾಗಲಿ, ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದ್ದಾರೆ.

Exit mobile version