Site icon PowerTV

ಹಿಂದೂ ಭಾರತೀಯ ಪದವೇ ಅಲ್ಲ ಪರ್ಷಿಯನ್ ಪದ; ಸತೀಶ್ ಜಾರಕಿಹೊಳಿ

ಚಿಕ್ಕೋಡಿ: ಹಿಂದೂ ಭಾರತೀಯ ಪದವೇ ಅಲ್ಲ ಪರ್ಷಿಯನ್ ಪದವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಹಿಂದೂ ಅದರ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ ಭಾರತೀಯ ಪದವೇ ಅಲ್ಲ ಪರ್ಷಿಯನ್ ಪದವಾಗಿದೆ ಎಂದರು.

ಭಾರತಕ್ಕೂ, ಪರ್ಷಿಯನ್ಗೂ ಏನ್ ಸಂಬಂಧವಿದೆ. ಹಿಂದೂ ಭಾರತೀಯ ಪದವೇ ಅಲ್ಲ. ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತದೆ ಎಂದು ಹಿಂದೂ ಸಮಾಜದ ಬಗ್ಗೆ ಅಪಸ್ವರದ ರೀತಿಯಲ್ಲಿ ಮಾತನಾಡಿದರು.

ಎಲ್ಲಿಂದಲೋ ಬಂದಿರೋ ಹಿಂದೂ ಧರ್ಮವನ್ನು ತಂದು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಕಿಡಿಕಾರಿದರು.

Exit mobile version