Site icon PowerTV

ಸರ್ಕಾರದ ವಿರುದ್ದ ಗುಡುಗಿದ ಶಾಸಕ ಪ್ರಿಯಾಂಕಾ ಖರ್ಗೆ..!

ಬೆಂಗಳೂರು:ಕಾಂಗ್ರೆಸ್ ಅವಧಿಯಲ್ಲಿ ಸೋಲಾರ್ ಟೆಂಡರ್ ನೀಡುವಲ್ಲಿ ಅವ್ಯವಹಾರದ ಬಗ್ಗೆ ರಾಜ್ಯ ಸರ್ಕಾರ ದಿಂದ ತೆನಿಖೆ ವಿಚಾರವಾಗಿ ಮಾತನಾಡಿದ ಶಾಸಕ ಪ್ರಿಯಾಂಕ ಖರ್ಗೆ ರವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ತನಿಖೆ ಮಾಡ್ಲಿ ಯಾರು ಬೇಡ ಅಂತಿದ್ದಾರೆ ಯಾರು ಹೆದರುತ್ತಿದ್ದಾರೆ..?, ನಿಮ್ದೆ CBI, ನಿಮ್ದೆ IT, ನಿಮ್ದೆ ED, ನಿಮ್ದೆ CCB, ನಿಮ್ದೆ ಸರ್ಕಾರ ತೆನಿಖೆ ಮಾಡಲಿ. ಮೇಲೆ‌ ಕೆಳಗಡೆ ನಿಮ್ದೇ ಸರ್ಕಾರ ತೆನಿಖೆ ಮಾಡಿಸಿ,  ಬುಟ್ಟಿಯಲ್ಲಿ ಹಾವು ಇದೆ ಅಂತ ಎಷ್ಟು ದಿನ ಅಂತ ಹರಿಬಿ ಹಾವು ತೋರಿಸುತ್ತೀರಾ?

ತನಿಕೆ ಮಾಡಿಸಿ ಜನರಿಗೆ ಗೊತ್ತಾಗಲಿ ಯಾರ್ ಯಾರ್ ಎಷ್ಟು ದುಡ್ಡ ತಗೆದುಕೊಂಡಿದ್ದಾರೆ ಅವರು ಕಾಲದಲ್ಲಿ ನಮ್ಮ ಕಾಲದಲ್ಲಿ.ಸುಮ್ಮನೆ ಮೀಡಿಯಾ ಮುಂದೆ ಬಂದು ಮಾತನಾಡಿದ್ರೆ ಏನ್ ಪ್ರಯೋಜನ. ಸರ್ಕಾರ ನೀವು ನಡೆಸುತ್ತಿದ್ದೀರಾ ಸ್ವಾಮಿ ಜವಬ್ದಾರಿಯಿಂದ ಮಾತನಾಡಿ. ರಸ್ತೆ ಗುಂಡಿ ಮುಚ್ಚಿ ಅಂದ್ರೆ ನಿಮ್‌ಕಾಲದಲ್ಲಿ ಇರಲಿಲ್ವಾ ಅಂತಾರೆ. ಹಗರಣ ಕಾಂಗ್ರೆಸ್ ಕಾಲದಲ್ಲಿ ಆಗಿಲ್ವಾ ಅಂತ ಪ್ರಜ್ಞೆ ಇಲ್ಲದೆ ಮಾತನಾಡಿದ್ರೆ ಏನು ಉತ್ತರ ಕೊಡೋದು. ಅದಕ್ಕಾ ಜನ ನಿಮ್ಗೆ ಅಧಿಕಾರ ಕೊಟ್ಟಿದ್ದು..? ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

Exit mobile version