Site icon PowerTV

ಸತತವಾಗಿ 5 ಗಂಟೆ ಇಡಿ ವಿಚಾರಣೆ ಎದುರಿಸಿದ ಡಿ.ಕೆ ಸುರೇಶ್​.!

ನವದೆಹಲಿ: ಇಡಿ ಸತತ ಐದು ಗಂಟೆಗಳ ಕಾಲಗಳ ವಿಚಾರಣೆ ಎದುರಿಸಿದ ಬಳಿಕ ಸಂಸದ ಡಿ.ಕೆ ಸುರೇಶ್ ಮಾತನಾಡಿ, ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ ಸಂಬಂಧಿಸಿದ ವಿವರವಾದ ಮಾಹಿತಿ ಕೇಳಿದ್ದಾರೆ. ದೇಣಿಗೆ ಹಣ ಯಾಕೆ ಪಾವತಿ ಮಾಡಿದ್ದೀರಿ? ಎಲ್ಲಿಂದ ಬಂತು, ಹಣದ ಮೂಲದ ಬಗ್ಗೆ ಕೇಳಿದ್ದಾರೆ ಎಂದು ವಿವರಿಸಿದರು.

ಇಡಿ ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ ಬಗ್ಗೆ ವಿಚಾರಣೆ ಎದುರಿಸಿದ ಬಗ್ಗೆ  ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್​, ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಕೆಲ‌ ದಾಖಲೆಗಳನ್ನ ಸಲ್ಲಿಸಲು ಹೇಳಿದ್ದಾರೆ. ಮೂರು ನಾಲ್ಕು ದಿನಗಳಲ್ಲಿ ಎಲ್ಲಾ ದಾಖಲಾತಿ ನೀಡುವುದಾಗಿ ಹೇಳಿದ್ದೇನೆ. ದೇಣಿಗೆ ವಿಚಾರಣಾಗಿಯೇ ಪ್ರಶ್ನೆ ಕೇಳಿದ್ದಾರೆ. ಇನ್ನು ಮುಂದಿನ ವಿಚಾರಣೆಗೆ ಬಗ್ಗೆ ಏನೂ ಹೇಳಿಲ್ಲ. ವಿಚಾರಣೆ ಅಗತ್ಯವಿದ್ರೆ ಸಹಕರಿಸುತ್ತೇವೆ ಎಂದರು.

ಇನ್ನು ಡಿ.ಕೆ‌ ಶಿವಕುಮಾರ್ ಅವ್ರ ಬಗ್ಗೆ ಇಡಿ ಪ್ರಶ್ನೆ ಮಾಡಿದ್ದು, ನೀವು ಅವರನ್ನೇ ಕೇಳಿ ಎಂದು ಹೇಳಿದ್ದೇನೆ. ಇದೇ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಗೆ ಮತ್ತೆ ಸಮನ್ಸ್ ನೀಡಲಿದ್ದಾರೆ. ಡಿಕೆ ಶಿವಕುಮಾರ್ ಮೂರುವಾರಗಳ ಕಾಲಾವಕಾಶ ಕೇಳಿದ್ದಾರೆ ಎಂದು ಡಿಕೆ ಸುರೇಶ್​ ಹೇಳಿದರು.

Exit mobile version