Site icon PowerTV

ಟಿಇಟಿ ಪರೀಕ್ಷಾ ಕೇಂದ್ರ ಬದಲು, ವಿದ್ಯಾರ್ಥಿಗಳ ಪರದಾಟ..!

ಕಲಬುರಗಿ: ಟಿಇಟಿ ಪರೀಕ್ಷಾ ಬದಲು ಮಾಡಿ ಅಭ್ಯರ್ಥಿಗಳನ್ನ ಸಂಕಷ್ಟಕ್ಕೆ ಸಿಲುಕಿಸಿದ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ
ಕೊನೆಯ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲು ಮಾಡಿದೆ.

ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದ ಹುಡುಕಾಟಕ್ಕೆ ಪರದಾಟ ಪಟ್ಟಿದ್ದಾರೆ. ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ಜೀವನ್ ಪ್ರಕಾಶ್ ಶಾಲೆಯ ಪರೀಕ್ಷಾ ಕೇಂದ್ರವಾಗಿ ಹಾಲ್ ಟಿಕೆಟ್ ನಲ್ಲಿ ಉಲ್ಲೇಖವಾಗಿತ್ತು. ಟಿಇಟಿ ಅಭ್ಯರ್ಥಿಗಳು ಜೀವನ್ ಪ್ರಕಾಶ್ ಶಾಲೆಗೆ ಬಂದಾಗ ಪರೀಕ್ಷಾ ಕೇಂದ್ರ ಬದಲಾಗಿರೋದು ಕಂಡು ಶಾಕ್ ಆಗಿದ್ದಾರೆ ವಿದ್ಯಾರ್ಥಿಗಳು. ಶಿಕ್ಷಣ ಇಲಾಖೆ ಕಲಬುರಗಿ ಜಿಲ್ಲಾಡಳಿತದ ವಿರುದ್ಧ ಅಭ್ಯರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬದಲಾದ ಪರೀಕ್ಷಾ ಕೇಂದ್ರ ಹುಡುಕಿಕೊಂಡು ಹೋದ ಅಭ್ಯರ್ಥಿಗಳು.

Exit mobile version