Site icon PowerTV

ತಾಂಜಾನಿಯಾದ ಸರೋವರದಲ್ಲಿ ವಿಮಾನ ಪತನ; 26 ಜನರ ರಕ್ಷಣೆ.!

ತಾಂಜಾನಿಯಾ: ಇಲ್ಲಿನ ಬುಕೋಬಾದಲ್ಲಿ 43 ಜನರನ್ನು ಹೊತ್ತ ವಿಮಾನಯೊಂದು ಲ್ಯಾಂಡಿಂಗ್​ ವೇಳೆ ಹವಾಮಾನ ವೈಪರಿತ್ಯದಿಂದ ಇಂದು ಬೆಳಿಗಿನ ಜಾವ ತಾಂಜಾನಿಯಾದ ವಿಕ್ಟೋರಿಯಾ ಸರೋವರಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಿಂದ 100 ಮೀಟರ್ ದೂರದಲ್ಲಿ ನೀರಿಗೆ ವಿಮಾನ ಅಪ್ಪಳಿಸಿತು ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ವಿಲಿಯಂ ಮ್ವಾಂಪಘಲೆ ಬುಕೋಬಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

39 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 43 ಜನರು ರಾಜಧಾನಿ ದಾರ್ ಎಸ್ ಸಲಾಮ್‌ನಿಂದ ಕಾಗೇರಾ ಪ್ರದೇಶದ ಲೇಕ್‌ಸೈಡ್ ಸಿಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸರೋವರಕ್ಕೆ ಅಪ್ಪಳಿಸಿದ ವಿಮಾನದಲ್ಲಿದ್ದ 26 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಏರ್‌ಲೈನ್ ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿವೆ. 

Exit mobile version