Site icon PowerTV

ಇನ್ನೂ ಬಗೆಹರಿಯದ ಓಲಾ,ಉಬರ್ ದರ ವಿವಾದ..!

ಬೆಂಗಳೂರು: ಓಲಾ,ಉಬರ್ ಸಮಸ್ಯೆ ಪರಿಹಾರಕ್ಕೆ ತಾರ್ಕಿಕ ಅಂತ್ಯ ಕಾಣಿಸದ ರಾಜ್ಯ ಸರ್ಕಾರ. ಸಭೆ ನಡೆಸಿ ಪರಿಹಾರಕ್ಕೆ ಸೂಚನೆಯನ್ನು ಹೈಕೋರ್ಟ್ ನೀಡಿತ್ತು. ಆದ್ರೂ ಇಲ್ಲಿಯವರಿಗೂ ದರ ನಿಗದಿ ಮಾಡದ ಸಾರಿಗೆ ಇಲಾಖೆ.

ಓಲಾ,ಉಬರ್ ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿಗದಿ ಬಗ್ಗೆ ಚರ್ಚಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು.ಆ್ಯಪ್ ಆಧಾರಿತ ಓಲಾ- ಉಬರ್ ಹಾಗೂ ಸರ್ಕಾರದ ನಡುವೆ ಮುಂದುವರೆದ ದರ ನಿಗದಿ ಹಗ್ಗಜಗ್ಗಾಟ.15 ದಿನದೊಳಗೆ ನ್ಯಾಯಯುತ ಹೊಸ ದರ ನಿಗದಿ ಮಾಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್.

ಆದ್ರೂ ಡೆಡ್ಲೈನ್ ಮುಗಿದ್ರೂ ದರ ಫಿಕ್ಸ್ ಮಾಡದ ಸಾರಿಗೆ ಇಲಾಖೆ ಅಧಿಕಾರಿಗಳು. ಮಿನಿಮಮ್ ಎರಡು ಕಿ.ಮೀಗೆ 100 ರೂ ದರ ನಿಗದಿ ಮಾಡುವಂತೆ ಕಂಪನಿಗಳು ಡಿಮ್ಯಾಂಡ್. ಹೀಗಾಗಿ ದರ ನಿಗದಿಗೆ ಮುಂದಾಗದ ಸಾರಿಗೆ ಇಲಾಖೆ. ಈ ಸಂಬಂಧ ನಾಳೆ ಹೈಕೋರ್ಟ್ ಗೆ ವರದಿ ಸಲ್ಲಿಕೆ ಮಾಡಲಿರೋ ಸಾರಿಗೆ ಇಲಾಖೆ ಅಧಿಕಾರಿಗಳು. ಕೋರ್ಟ್ ನಿರ್ಧಾರದಂತೆ ನಾಳೆ ದರ ನಿಗದಿ ಮಾಡುವ ಸಾಧ್ಯತೆ.

Exit mobile version