Site icon PowerTV

ಶಾಸಕರ ಹೆಸರಲ್ಲಿ ಕೆಎಸ್ಆರ್ ಟಿಸಿ ಎಂಡಿಗೆ ಕರೆ..!

ಮಂಡ್ಯ: ಶಾಸಕರ ಹೆಸರಲ್ಲಿ ಕೆಎಸ್ಆರ್ ಟಿಸಿ ಎಂಡಿಗೆ ಕರೆ ಮಾಡಿದ್ದ ವ್ಯಕ್ತಿಯ ಬಂಧನ. ವಿಲ್ಸನ್ ಗಾರ್ಡನ್ ಪೊಲೀಸರಿಂದ ಪುನೀತ್ ಕುಮಾರ್ ಎಂಬಾತನ ಬಂಧನ.

ಮೈಸೂರು ಶಾಸಕ ನಾಗೇಂದ್ರ ಹೆಸರಲ್ಲಿ ಕರೆ ಮಾಡಿದ ಆರೋಪಿ. ಕೆಎಸ್ಆರ್ ಟಿಸಿ ಎಂಡಿಗೆ ಕರೆ ಮಾಡಿ ಕೆಲವು ಸಿಬ್ಬಂದಿ ವರ್ಗಾವಣೆ ಮಾಡಲು ಶಿಫಾರಸ್ಸು. ಮಂಡ್ಯ ಘಟಕದಿಂದ ಮಳವಳ್ಳಿ ಘಟಕಕ್ಕೆ ಚಾಲಕ ನಿರ್ವಾಹಕರನ್ನ ವರ್ಗಾವಣೆ ಮಾಡಲು ಸೂಚನೆ.ಎಂಎಲ್ಎ ಎಂದು ಕರೆ ಮಾಡಿ ಕೌಟುಂಬಿಕ ಕಾರಣ ನೀಡಿ ವರ್ಗಾವಣೆ ಮಾಡುವಂತೆ ಸೂಚನೆ. ಬಳಿಕ ಶಾಸಕ ನಾಗೇಂದ್ರ ಅವರನ್ನ ಸಂಪರ್ಕ ಮಾಡಿದ್ದ ಕೆಎಸ್ಆರ್ ಟಿಸಿ ಅಧಿಕಾರಿಗಳು.

ಈ ವೇಳೆ ತಾನು ಯಾವ ಕರೆಯನ್ನು ಮಾಡಿಲ್ಲ ಎಂದಿದ್ದ ಶಾಸಕ ನಾಗೇಂದ್ರ. ಬಳಿಕ ಶಾಸಕರ ಹೆಸರಲ್ಲಿ ಕರೆ ಮಾಡಿದ ಅಸಾಮಿ ವಿರುದ್ಧ ದೂರು. ದೂರು ದಾಖಲಿಸಿ ಪುನೀತ್ ಕುಮಾರ್ ಎಂಬಾತನ ಬಂಧನ. ಕೆಲವು ಸಿಬ್ಬಂದಿ ವರ್ಗಾವಣೆಗಾಗಿ ಶಾಸಕರ ಹೆಸರು ಬಳಸಿಕೊಂಡಿದ್ದ ಆರೋಪಿ ಪುನೀತ್.

Exit mobile version