Site icon PowerTV

ಎಐಸಿಸಿಯ ನೂತನ ಅಧ್ಯಕ್ಷರಿಗೆ ಅದ್ದೂರಿ ಸ್ವಾಗತ..!

ಬೆಂಗಳೂರು:ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಆಗಮನ. ಅರಮನೆ ಮೈದಾನದಲ್ಲಿ ಮಧ್ಯಾಹ್ನ ಕಾಂಗ್ರೆಸ್ ನಿಂದ ಸರ್ವೋದಯ ಸಮಾವೇಶ ನಡೆಯಲಿದೆ.

ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ನಡೆಯಲಿರೋ ಸ್ವಾಗತ ಸಮಾವೇಶ. ಖರ್ಗೆ ಸ್ವಾಗತಕ್ಕೆ ಕೈ ನಾಯಕರಿಂದ ಭರ್ಜರಿ ಸಿದ್ಧತೆ
ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಸರ್ವೋದಯ ಸಮಾವೇಶಕ್ಕೆ ಒಂದು ಲಕ್ಷ ಕಾರ್ಯಕರ್ತರು ಭಾಗಿ ಸಾಧ್ಯತೆ. ಮುಖ್ಯ ವೇದಿಕೆಯಲ್ಲಿ 125 ಪ್ರಮುಖ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ, ಮುಖ್ಯ ವೇದಿಕೆಯ ಎಡ, ಬಲ ಭಾಗದಲ್ಲೂ ವೇದಿಕೆ
ಎಐಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.ಮಧ್ಯಾಹ್ನ 2 ಗಂಟೆ ನಂತರ ಸಮಾವೇಶ ಆರಂಭವಾಗಲಿದೆ.

Exit mobile version