Site icon PowerTV

‘ಕಡೆಗೂ ಸೆರೆ ಸಿಕ್ಕ ಕೊಟ್ಟಿಗೆಯಲ್ಲಿದ್ದ ಚಿರತೆ.’..!

ಮಂಡ್ಯ:ಕಡೆಗೂ ಕೊಟ್ಟಿಗೆಯಲ್ಲಿದ್ದ ಚಿರತೆ ಸೆರೆ ಸಿಕ್ಕಿದೆ. ಕೊಟ್ಟಿಗೆಯಲ್ಲಿ ಲಾಕ್ ಹಾಗಿದ್ದ ಚಿರತೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದೆ.
ಅರವಳಿಕೆ ಮದ್ದು ನೀಡಿ ಚಿರತೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು.

ಒಂದೂವರೆ ವರ್ಷ ವಯಸ್ಸಿನ ಚಿರತೆ. ನಿನ್ನೆ ರಾತ್ರಿ ಆಹಾರ ಅರಸಿ ಕುಂದನಗುಪ್ಪೆ ಗ್ರಾಮಕ್ಕೆ ಬಂದಿದ್ದ ಚಿರತೆ.ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುಂದನಕುಪ್ಪೆ ಗ್ರಾಮ. ಗ್ರಾಮದ ಕೃಷ್ಣ ಎಂಬುವವರ ಕುರಿ-ಮೇಕೆ ಕೊಟ್ಟಿಗೆಗೆ ನುಗ್ಗಿ ಲಾಕ್ ಆಗಿದ್ದ ಚಿರತೆ.

ಚಿರತೆ ಸೆರೆಹಿಡಿದು ಮೈಸೂರಿನತ್ತ ಕರೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿಗಳು. ಕಾಡಿಗೆ ಚಿರತೆ ಬಿಡುವ ಸಾಧ್ಯತೆ.ಡಿಎಫ್ಓ ವೃತ್ತರನ್ ಹಾಗೂ ಪಶು ವೈದ್ಯ ಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆ.

Exit mobile version