Site icon PowerTV

ಅಕ್ರಮ ಹುಕ್ಕಾ ಬಾರ್ ಗಳ ವಿರುದ್ಧ ದೂರು ಸಿಸಿಬಿ ರೇಡ್..!

ಬೆಂಗಳೂರು:ಅಕ್ರಮ ಹುಕ್ಕಾ ಬಾರ್ ಗಳ ವಿರುದ್ಧ ದೂರು ದಾಖಲಾಗ್ತಿದ್ದಂತೆ ಸಿಸಿಬಿ ರೇಡ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುಮಾರು 400 ಅಕ್ರಮ ಹುಕ್ಕಾಬಾರ್ ವಿರುದ್ದ ದೂರು ದಾಖಲಾಗಿತ್ತು.

ಆಮ್ ಆದ್ಮಿ ಪಕ್ಷದ ಮುಖಂಡ ಗಿರೀಶ್ ಕುಮಾರ್ ನಾಯ್ಡು ಸಿಸಿಬಿ ಜಂಟಿ ಆಯುಕ್ತ ರಮಣ್ ಗುಪ್ತಾಗೆ ದೂರು ನೀಡಿದ್ರು, ಸುಮಾರು 400 ಅಕ್ರಮ ಹುಕ್ಕಾಬಾರ್ ಗಳ ಅಡ್ರೆಸ್ ಸಮೇತ ದೂರು ನೀಡಿದ್ದ ಗಿರೀಶ್ ಕುಮಾರ್ ನಾಯ್ಡು. ದೂರಿನನ್ವಯ ಇವತ್ತು ಮುಂಜಾನೆ ಅಕ್ರಮ ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದಾರೆ.

ಮಡಿವಾಳ, ಜೀವನ್ ಭೀಮಾ ನಗರ, ಕರ್ಮಷಿಯಲ್ ಸ್ಟ್ರೀಟ್ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ರೇಡ್ ನಡೆಸಿದ್ದಾರೆ. ಜೀವನ್ ಭೀಮಾನಗರದ ಕ್ಯಾಶಿಷ್ ಕೆಫೆ, ಮಡಿವಾಳದ ಎಮಿರೇಟ್ ಶೀಷಾ ಹೋಟೆಲ್ ರೆಸ್ಟೋರೆಂಟ್, ಕರ್ಮಷಿಯಲ್ ಸ್ಟ್ರೀಟ್ ನ ಬರ್ನೋಟ್ ಕೆಫೆ ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ದಾಳಿ. ನಿಯಮ ಮೀರಿ ಅವಧಿ ಮುಗಿದ್ರು ಹುಕ್ಕಾಬಾರ್ ನಡೆಸುತ್ತಿದ್ದ ಹೋಟೆಲ್ ರೆಸ್ಟೋರೆಂಟ್ ಗಳು.

Exit mobile version