Site icon PowerTV

ಬೈಕ್​ ಓಡಿಸುತ್ತಾ ಸ್ನಾನ ಮಾಡಿದ ಇಬ್ಬರು ಯುವಕರು; ವೈರಲ್​ ಬಳಿಕ ದಂಡದ ಬಿಸಿ

ಕೇರಳ: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದ್ದ ಇಬ್ಬರು ಯುವಕರನ್ನು ಪೊಲೀಸರು ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಶಕ್ಕೆ ಪಡೆದಿರುವ ಘಟನೆ ಕೊಲ್ಲಂ ನಲ್ಲಿ ನಡೆದಿದೆ.

ಕೊಲ್ಲಂನ ಭರಣಿಕ್ಕಾವು ನಿವಾಸಿಗಳಾದ ಅಜ್ಮಲ್ ಮತ್ತು ಬಾದುಷಾ ಬೈಕನಲ್ಲಿಯೇ ಸ್ನಾನ ಮಾಡಿದ ವ್ಯಕ್ತಿಗಳಲಾಗಿದ್ದು, ಮಳೆಯ ನಡುವೆಯೇ ಸಾಬೂನು ಹಚ್ಚಿಕೊಂಡು ಬೈಕ್ ಓಡಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ವೀಡಿಯೊ ವೈರಲ್ ಆದ ನಂತರ, ರಸ್ತೆಯಲ್ಲಿ ಅಪಾಯಕಾರಿ ಚಾಲನೆಯಲ್ಲಿ ತೊಡಗಿದ್ದಕ್ಕಾಗಿ ಪೊಲೀಸರು ಈ ಯುವಕರಿಬ್ಬರಿಗೆ 5,000 ರೂ ದಂಡವಿಧಿಸಿದ್ದಾರೆ. ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಅವರಿಗೆ ದಂಡ ವಿಧಿಸಿದ್ದೇವೆ ಎಂದು ಈ ಬಗ್ಗೆ ಪೊಲೀಸರು ಹೇಳಿದರು.

Exit mobile version