Site icon PowerTV

ಟ್ವಿಟರ್​ನಲ್ಲಿ ಉದ್ಯೋಗ ಕಡಿತ

ಟ್ವಿಟರ್ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಆರಂಭಿಸಿರುವ ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಇದೀಗ ಭಾರತದಲ್ಲಿ ಸಿಬ್ಬಂದಿ ವಜಾ ಪ್ರಕ್ರಿಯೆ ಆರಂಭಿಸಿದೆ. ನೂತನ ಮಾಲೀಕ ಎಲಾನ್ ಮಸ್ಕ್ ಈಗ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಕಳೆದ ವಾರ ಟ್ವಿಟರ್‌ನ ಸಿಇಒ ಪರಾಗ್ ಅಗರವಾಲ್ ಮತ್ತು ಸಿಎಫ್‌ಒ, ಇತರ ಕೆಲವು ಉನ್ನತ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದರು. ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಗಳ ವಜಾಗೊಳಿಸಿದ ನಂತರ ಟ್ವಿಟರ್ ಜಾಗತಿಕ ಮಟ್ಟದಲ್ಲಿ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ವಜಾ ಮಾಡಿರುವ ಬಗ್ಗೆ ತನ್ನ ಸಹೋದ್ಯೋಗಿಗಳಿಗೆ ಎಲಾನ್ ಮಸ್ಕ್ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ.

ಇದೀಗ ಭಾರತದಲ್ಲಿರುವ ಉದ್ಯೋಗಿಯೊಬ್ಬರು ಅನಾಮಧೇಯ ಷರತ್ತಿನ ಮೇಲೆ ತಮ್ಮನ್ನು ವಜಾ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಭಾರತದಲ್ಲಿ ಎಷ್ಟು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಸಂಪೂರ್ಣ ವಿವರಗಳು ಲಭ್ಯವಿಲ್ಲ. ಉದ್ಯೋಗಿಗಳ ಸುರಕ್ಷತೆ, ಟ್ವಿಟರ್ ವ್ಯವಸ್ಥೆಗಳು ಮತ್ತು ಗ್ರಾಹಕರ ಡೇಟಾಕ್ಕಾಗಿ ಕಂಪನಿಯ ಎಲ್ಲಾ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನೀವು ಕಚೇರಿಯಲ್ಲಿದ್ದರೆ ಅಥವಾ ಕಚೇರಿಗೆ ಹೋಗುತ್ತಿದ್ದರೆ ದಯವಿಟ್ಟು ಯಾರೂ ಹೋಗುವುದು ಬೇಡ ಎಂದು ಟ್ವಿಟರ್​ನ ಅಧಿಕೃತ ಮೇಲ್​ನಿಂದ ಉದ್ಯೋಗಿಗಳಿಗೆ ಸಂದೇಶ ರವಾನಿಸಲಾಗಿದೆ.

Exit mobile version