Site icon PowerTV

ಭಾರತವನ್ನು ಹಾಡು ಹೊಗಳಿದ ಪುಟಿನ್​​

ಸ್ವತಂತ್ರ ವಿದೇಶಾಂಗ ನೀತಿ ಬಗ್ಗೆ ಕಳೆದ ವಾರವಷ್ಟೇ ಭಾರತವನ್ನು ಹೊಗಳಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದೀಗ ಮತ್ತೆ ಭಾರತೀಯರ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತೀಯರು ಪ್ರತಿಭಾವಂತರು ಹಾಗೂ ಪರಿಶ್ರಮಿಗಳು ಎಂದು ಅವರು ಬಣ್ಣಿಸಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಅತ್ಯದ್ಭುತ ಫಲಿತಾಂಶ ಕಂಡುಕೊಳಲು ಬೇಕಾದಷ್ಟು ಸಾಮರ್ಥ್ಯ ಭಾರತದಲ್ಲಿದೆ ಎಂಬ ಕುರಿತು ಅನುಮಾನವೇ ಬೇಡ ಎಂದು ಅವರು ಹೇಳಿದ್ದಾರೆ.

ರಷ್ಯಾದ ಏಕತಾ ದಿನದಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಭಾರತವು ಅತ್ಯುತ್ತಮ ಫಲಿತಾಂಶ ಹೊಂದಲಿದೆ ಎಂಬ ವಿಚಾರದಲ್ಲಿ ಅನುಮಾನವೇ ಬೇಡ. ಭಾರತದಲ್ಲಿರುವ ಸುಮಾರು ಒಂದೂವರೆ ಶತಕೋಟಿ ಜನರಲ್ಲಿ ಆ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಆಫ್ರಿಕಾದ ವಸಾಹತುಶಾಹಿ, ಭಾರತದ ಸಾಮರ್ಥ್ಯ ಹಾಗೂ ರಷ್ಯಾದ ನಾಗರಿಕತೆ, ಸಂಸ್ಕೃತಿಯ ಬಗ್ಗೆ ಕೂಡ ಪುಟಿನ್ ಮಾತನಾಡಿದ್ದಾರೆ.

Exit mobile version