Site icon PowerTV

ಮೈಸೂರಿನಲ್ಲಿ ‘ಪವರ್’ ಫರ್ನಿಚರ್ ಎಕ್ಸ್‌ಪೋಗೆ ಚಾಲನೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪವರ್‌ ಟಿವಿ ಆಯೋಜಿಸಿರುವ ಫರ್ನಿಚರ್‌ ಎಕ್‌ಪೊ ಉದ್ಘಾಟನೆ ಮಾಡಲಾಯಿತು. ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ್‌ ದೀಕ್ಷಿತ್‌, ಕೆ.ಆರ್‌.ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್‌, ವಸ್ತ್ರ ವಿನ್ಯಾಸಕಿ ಜಯಂತಿ ಬಲ್ಲಾಳ್‌ ಫರ್ನಿಚರ್‌ ಎಕ್ಸ್‌ಪೊಗೆ ಚಾಲನೆ ನೀಡಿದರು.

ಇಂದಿನಿಂದ ನಾಲ್ಕು ದಿನಗಳ ಕಾಲ ಪವರ್ ಫರ್ನಿಚರ್ ಎಕ್ಸ್‌ಪೊ ನಡೆಯಲಿದೆ. ಮೈಸೂರಿನ ಚಾಮುಂಡೇಶ್ವರಿ ಒಳಾಂಗಣದ ಸ್ಟೇಡಿಯಂನಲ್ಲಿ ಎಕ್ಸ್‌ಪೊವನ್ನು ನಿಮ್ಮ ಪವರ್ ಟಿವಿ ಆಯೋಜಿಸುತ್ತಿದೆ. ಅತಿ ದೊಡ್ಡ ಫರ್ನಿಚರ್ & ಹೋಮ್ ಇಂಟೀರಿಯರ್ ಎಕ್ಸ್‌ಪೊ ನಡೆಯುತ್ತಿದ್ದು, ಫರ್ನಿಚರ್ ಮೇಳದಲ್ಲಿ ಮನೆ ಹಾಗೂ ಕಚೇರಿಗಳಿಗೆ ಬೇಕಾದ ಎಲ್ಲಾ ಬಗೆಯ ಅತ್ಯಾಕರ್ಷಕ ಪೀಠೋಪಕರಣಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ಕಾರ್ವಿಂಗ್ ಸೆಟ್, ಡಿಸೈನ್ ಸೋಫಾಸ್, ಡೈನಿಂಗ್ ಟೇಬಲ್, ಎಲ್ ಸೇಪ್ ಸೋಫಾಸ್. ಟೀಕ್ ವುಡ್ ಸೋಫಾ, ಅಪೋಲಾಸ್ ಸ್ಟ್ರಿ ಸೋಫಾಸ್ ಸೇರಿದಂತೆ ಇತರೆ ಡಿಸೈನ್ ಸೋಫಾಗಳು ದೊರೆಯುತ್ತವೆ. ಈ ಮೇಳದಲ್ಲಿ ಗ್ರಾಹಕರಿಗೆ ಶೇಕಡಾ 10 ರಿಂದ‌ 70 % ವರೆಗೆ ರಿಯಾಯಿತಿ ದೊರೆಯಲಿದೆ..

Exit mobile version