Wednesday, August 27, 2025
Google search engine
HomeUncategorizedಪದ್ಮಾವತಿ ಕಂಬ್ಯಾಕ್​​ಗೆ ಮನೆ ಮುಂದೆ ಬಿಗ್​​​​​​​ ಪ್ರೊಟೆಸ್ಟ್​​​​.!?

ಪದ್ಮಾವತಿ ಕಂಬ್ಯಾಕ್​​ಗೆ ಮನೆ ಮುಂದೆ ಬಿಗ್​​​​​​​ ಪ್ರೊಟೆಸ್ಟ್​​​​.!?

ಬೆಂಗಳೂರು: ವೀ ವಾಂಟ್​​ ರಮ್ಯಾ..! ವೀ ವಾಂಟ್​ ರಮ್ಯಾ ..! ಸಾರ್ರಿ, ಇದು ಪವರ್ ಟಿವಿ ಪ್ರೊಟೆಸ್ಟ್​ ಅಲ್ಲಾ. ಹಾಸ್ಟೆಲ್​ ಹುಡುಗ್ರ ಬೀದಿ ರಂಪಾಟ. ರಮ್ಯಾ ಮನೆಗೆ ನುಗ್ಗಿ ಪಡ್ಡೆ ಹೈಕಳು ಸ್ಟ್ರೈಕ್​​​ ಮಾಡಿದ್ದಲ್ಲದೆ, ಜೋರಾಗಿ ಘೋಷಣೆ ಕೂಗಿದ್ದಾರೆ.

ಇಂದು, ಮುಂದು, ಎಂದೆಂದೂ ರಮ್ಯಾ ಪಡ್ಡೆ ಹೈಕಳ ಮುದ್ದು ಕಿನ್ನರಿ. ಪೋಲಿ ಹುಡುಗರ ಕನಸಿನ ದೇವತೆ. ಅವಳೆದ್ರು ಬಂದ್ರೆ ಎದೆ ಬಡಿತದ ಧನಿ ಕೂಡ ರಮ್ಯಾ, ರಮ್ಯಾ ಅಂತ ಕನವರಿಸುವ ಸೌಂದರ್ಯದ ಗಣಿ. ಹೃದಯದ ಪುಟ್ಟ ಗುಡಿಯಲ್ಲಿ ಅವಳಿಗೊಂದು ಜಾಗ ಸದಾ ಫಿಕ್ಸ್​​. ಇನ್ನೂ ಯುವಕರಿಗೆ ಗರ್ಲ್​​​ ಫ್ರೆಂಡ್​​​​ಗಿಂತ ಮುದ್ದಾಗಿ ಕಾಣೋ ರಂಬೆ, ಊರ್ವಶಿ, ಮೇನಕೆ ಎಲ್ಲಾ.

ಯೆಸ್​​​… ಎಷ್ಟು ಹೊಗಳಿದ್ರೂ ಪದಗಳೇ ಸಾಲದ ರಮ್ಯಾ, ಹಾಸ್ಟೆಲ್​ ಹುಡುಗರ ಸಹವಾಸ ಮಾಡಿ ಪೇಚಿಗೆ ಸಿಕ್ಕಿಬಿದ್ದಿದ್ದಾರೆ. ಮನೆಮುಂದೆ ಹಾಸ್ಟೆಲ್​​ ಹುಡುಗ್ರ ದಂಡೇ ಸೇರಿ ಪ್ರೊಟೆಸ್ಟ್​ ಮಾಡಿದೆ. ಎಂಟು ವರ್ಷದಿಂದ ಸಿನಿಮಾ ಮಾಡಿಲ್ಲ. ನಿಮ್ಮನ್ನು ನೋಡದ ಕಣ್ಣೇಕೆ ಎಂದು ಕಣ್ಣುಗಳನ್ನೆ ಕಿತ್ತುಕೊಂಡಿದ್ದಾರೆ. ಕೈಕಾಲು ಕಟ್​ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಹೋಗಿ ತಲೆ ಕೂಡ ಕತ್ತರಿಸಿಕೊಂಡಿದ್ದು ಹೋರಾಟ ತೀವ್ರವಾಗಿದೆ.

ಸ್ಯಾಂಡಲ್​ವುಡ್​ನಲ್ಲಿ 300 ಕ್ಕೂ ಅಧಿಕ ಹೊಸ ಕಲಾವಿದ್ರ ತಾರಾಗಣದಲ್ಲಿ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಅನ್ನೋ ಸಿನಿಮಾ ಬರ್ತಿದೆ. ಈ ಇದೊಂದು ಫನ್​ ಕಾಮಿಡಿ ಜಾನರ್​ ಚಿತ್ರವಾಗಿದ್ದು, ವಿಭಿನ್ನವಾಗಿ ಪ್ರಮೋಷನ್​​ ಕೂಡ ಮಾಡ್ತಿದೆ. ನಿತಿನ್​ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸಿನಿಮಾ ಇದಾಗಿದ್ದು, ತಮಾಷೆಗಳ ಆಗರವಾಗಿದೆ. ಸದ್ಯ ಈ ಚಿತ್ರದ ಪ್ರೋಮೋ ರಿಲೀಸ್​ ಆಗಿದ್ದು ನಮ್ಮ ಸಿನಿಮಾದಲ್ಲಿ ರಮ್ಯಾ ಅ್ಯಕ್ಟ್​ ಮಾಡಲೇಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ಸಖತ್​ ಫನ್ನಿಯಾಗಿ ಮೂಡಿ ಬಂದಿರುವ ಹಾಸ್ಟೆಲ್​​ ಹುಡಗರ ಪ್ರೋಮೋ ಸೋಶಿಯಲ್​​ ಮೀಡಿಯಾದಲ್ಲಿ ಸ್ಮಾಶ್​​ ಹಿಟ್​ ಆಗಿದೆ. ಕಲರ್​​ಫುಲ್​ ಕಮೆಂಟ್ಸ್​ಗಳು ಹರಿದು ಬರ್ತಿದ್ದು ನೆಟ್ಟಿಗರು ಪುಳಕಗೊಂಡಿದ್ದಾರೆ. ಏನೇ ಇರಲಿ ಈ ವೀಡಿಯೋ ರಮ್ಯಾ ಅವರಿಗೆ ಹೇಳಿ ಮಾಡಿಸಿದಂತಿದ್ದು ಅಭಿಮಾನಿಗಳು ಸಖತ್ ಥ್ರಿಲ್​ ಆಗಿದ್ದಾರೆ. ಏನೇ ಇರಲಿ, ಈ ಸಿನಿಮಾ ಮೂಲಕ ರಮ್ಯಾ ಕಂಬ್ಯಾಕ್​​ ಆದ್ರೆ, ಕೋಟಿ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments