Site icon PowerTV

ಕೊಬ್ಬರಿಗೆ 20 ಸಾವಿರ ರೂ ಬೆಂಬಲ ಬೆಲೆ ನೀಡಲು ಒತ್ತಾಯ.!

ತುಮಕೂರು; ಕೊಬ್ಬರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಬೆಕೆಂದು ಒತ್ತಾಯಿಸಿ ಇಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ನೇತೃತ್ವದಲ್ಲಿ ತುಮಕೂರಲ್ಲಿ ಬೃಹತ್​ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಕೊಬ್ಬರಿ ಬೆಲೆ ದಿಢೀರ್ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ತಿಪಟೂರು ಎಪಿಎಂಸಿ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ಟ್ರಾಕ್ಟರ್ ರ್ಯಾಲಿಯನ್ನು ನಡೆಸಿದ ಬಳಿಕ ಕನಿಷ್ಠ 20 ಸಾವಿರ ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಲಾಯಿತು.

ಸ್ವತಃ ಕೆ.ಟಿ.ಶಾಂತಕುಮಾರ್ ಅವರೇ ರೈತರೊಂದಿಗೆ ಸೇರಿ ಟ್ರಾಕ್ಟರ್ ಚಾಲನೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ್ರು. ದಿಢೀರ್ ಕೊಬ್ಬರಿ ಬೆಲೆ ಇಳಿಕೆಯಾಗಿದ್ದು, 10ರಿಂದ 12 ಸಾವಿರಕ್ಕೆ ಕೊಬ್ಬರಿ ಬೆಲೆ ಬಂದು ತಲುಪಿದ್ದು ಕೊಬ್ಬರಿಯನ್ನೇ ನಂಬಿಕೊಂಡಿದ್ದ ರೈತರು ಬೀದಿಗೆ ಬರುವ ಪರಿಸ್ಥಿತಿ ಬಂದಿದೆ.

ಹಾಗಾಗಿ ಕೊಬ್ಬರಿ ಬೆಲೆಯನ್ನು 20 ಸಾವಿರಕ್ಕೆ ಸರ್ಕಾರ ನಿಗದಿಗೊಳಿಸಬೇಕು ಎಂದು ಕೆ.ಟಿ.ಶಾಂತಕುಮಾರ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ತಿಪಟೂರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಹೋರಾಟದಲ್ಲಿ ನೂರಾರು ರೈತರು ಭಾಗವಹಿಸಿದರು.

Exit mobile version