Site icon PowerTV

ಗೆಳೆಯನ ಬರ್ತಡೇ’ಗೆ ವಿಶ್​ ಮಾಡಿ, ಯಾರೂ ನಂಬದಿರುವಾಗ ಅವನು ನಂಬುವವನು ಎಂದ ದಿನೇಶ್​ ಕಾರ್ತಿಕ್​.!

ನವದೆಹಲಿ: ರನ್​ ಮಷಿನ್​, ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸಮನ್​ ವಿರಾಟ್​ ಕೊಹ್ಲಿ ಇಂದಿಗೆ 34 ವರ್ಷ ತುಂಬಿದೆ. ಜಗತ್ತಿನ ಮೂಲೆ ಮೂಲೆಗಳಿಂದ ಕ್ರಿಕೆಟಿಗರು, ಸಿನಿಮಾ ನಟ-ನಟಿಯರು ಸೇರಿದಂತೆ ಹೀಗೆ ನಾನಾ ದಿಗ್ಗಜ ವ್ಯಕ್ತಿಗಳು ವಿರಾಟ್​ ಕೊಹ್ಲಿ ಅವರ ಹುಟ್ಟು ಹಬ್ಬಕ್ಕೆ ವಿಶ್​ ಮಾಡಿ ಶುಭಕೋರಿದ್ದಾರೆ.

ಅದರಂತೆ ಇತ್ತೀಚಿಗೆ ಟೀಂ ಇಂಡಿಯಾ ಕ್ರಿಕೆಟ್​ ತಂಡದ ಫಿನಿಶರ್​ ಎಂದೇ ಖ್ಯಾತಿಯಾಗಿರುವ ದಿನೇಶ್​ ಕಾರ್ತಿಕ್​ ಅವರು ಸಹ ಇಂದು ಟ್ವೀಟ್​ ಮಾಡಿ ಕಿಂಗ್ ಕೊಹ್ಲಿಗೆ ಶುಭಾಶಯ ತಿಳಿಸಿದ್ದಾರೆ.

ಇಂದು ವಿರಾಟ್​ ಕೊಹ್ಲಿ ಜತೆಗೆ ಇರುವ ಫೋಟೋ ಸಮೇತವಾಗಿ ಟ್ವೀಟ್​ ಮಾಡಿದ ದಿನೇಶ್​ ಕಾರ್ತಿಕ್​, ಯಾರೂ ನಂಬದಿರುವಾಗ ಅವನು ನಂಬುವವನು. ನಿಮಗೆ ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದಾರೆ. ಕಾರ್ತಿಕ್​ ಬರೆದ ಈ ಲೈನ್​ ಗಳು ಕೊಹ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದರಂತೆ ವಿರಾಟ್ ಅವರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಜಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರು ಹುಟ್ಟು ಹಬ್ಬಕ್ಕೆ ಶುಭಕೋರಿರೋದನ್ನ ಆರ್​ಸಿಬಿ ವಿಡಿಯೋ ಹಂಚಿಕೊಂಡಿದೆ. ಹಂಚಿಕೊಂಡ ವೀಡಿಯೊದಲ್ಲಿ ವಿರಾಟ್​ನನ್ನ ಡಿವಿಲಿಯರ್ಸ್​ ಕೊಹ್ಲಿ ನ್ನ ಅಭಿನಂದಿಸಿದ್ದಾರೆ.

ನೀವು ಚೆನ್ನಾಗಿ ಕ್ರಿಕೆಟ್​ನಲ್ಲಿ ಆಡುತ್ತಿದ್ದೀರಿ ಎಂದು ಭಾವಿಸುತ್ತೇನೆ. ನಾನು ಪ್ರಸ್ತುತ ಬೆಂಗಳೂರಿನಲ್ಲಿದ್ದೇನೆ. ನಿಮಗೆ ಜನ್ಮದಿನದ ಶುಭಾಶಯಗಳನ್ನು ಕೋರಲು ನಾನು ನಿಮಗೆ ಸಂದೇಶವನ್ನು ಕಳುಹಿಸುತ್ತಿದ್ದೇನೆ. ನಿಮಗೆ ಇಂದು ಅದ್ಭುತ ದಿನ ಎಂದು ನಾನು ಭಾವಿಸುತ್ತೇನೆ. ನೀವು ಒಬ್ಬ ಕ್ರಿಕೆಟ್ ಆಟಗಾರ, ಆದರೆ ನೀವು ಹೆಚ್ಚು ಉತ್ತಮ ಮನುಷ್ಯ. ನಿಮ್ಮ ಸ್ನೇಹಕ್ಕಾಗಿ ತುಂಬಾ ಧನ್ಯವಾದಗಳು ಎಂದಿದ್ದಾರೆ.

Exit mobile version