Site icon PowerTV

ಮೂಲ ನಕ್ಷತ್ರದಲ್ಲಿ ಮಗು ಜನನ : ಹೆಂಡತಿ, ಮಗುವನ್ನೇ ದೂರ ಮಾಡಿದ ಪತಿರಾಯ

ರಾಮನಗರ : ಜಾತಕ, ಶಾಸ್ತ್ರಗಳನ್ನು ನಂಬಿ ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದ್ರೆ ಅಪಶಕುನ ಎಂದು ಪತಿರಾಯ ಹೆಂಡತಿ, ಮಗುವನ್ನೇ ದೂರ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ.

ಪಾಪಿ ಪತಿ ಮೂಢನಂಬಿಕೆಗೆ ಜೋತು ಬಿದ್ದು ಹೆಂಡತಿ, ಮಗುವನ್ನು ಹೊರ ತಳ್ಳಿದ್ದಾನೆ. ನೊಂದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಕಳೆದ ಎರಡು ವರ್ಷದಿಂದ ಇಲ್ಲ ಸಲ್ಲದ ಕಿರುಕುಳ ಕೊಟ್ಟಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಪತಿ ನವೀನ್ ಹಾಗೂ ಕುಟುಂಬಸ್ಥರ ವಿರುದ್ದ ಪತ್ನಿ ಶೃತಿ ಆರೋಪ ಮಾಡಿದ್ದಾಳೆ.

Exit mobile version