Site icon PowerTV

ಬಾರಿ ಕುತೂಹಲ ಮೂಡಿಸಿದ ಕೈಪಾಳಯದ ರಹಸ್ಯ ಸಭೆ

ಬೆಂಗಳೂರು: ಕಾಂಗ್ರೆಸ್ ಜೋಡೋ ಸಭೆ ಆರಂಭವಾಗಿದೆ. ಇನ್ನು ಈ ರಹಸ್ಯ ಸಭೆಯು ಬಾರಿ ಕುತೂಹಲ ಮೂಡಿಸಿದೆ. ಮುಂಬರುವ ಎಲೆಕ್ಷನ್ ವಿಚಾರವಾಗಿ ರಹಸ್ಯ ಸಭೆ.

ಸುರ್ಜೇವಾಲ ಸಮ್ಮುಖದಲ್ಲಿ ನಡೆಯುತ್ತಿರುವ ಸಭೆ. ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ‌‌‌ ನಡೆದಿದೆ. ಸಭೆಗೆ ಜಿಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ಹಾಜರಿದ್ದರು. ಪರಾಭವಗೊಂಡ ಅಭ್ಯರ್ಥಿಗಳಿಗೆ ಮಾತ್ರ ಎಂಟ್ರಿ ಉಳಿದರಿಗೆ ನೋ ಎಂಟ್ರಿ. ರಹಸ್ಯ ಸಭೆಯ ಹಿಂದೆ ಇದ್ಯಾ ಜೋಡೋ ಉದ್ದೇಶ..?ಜಿಲ್ಲಾ ಸಮಿತಿಯಗಳಲ್ಲಿ ಸಮನ್ವಯ ಮೂಡಿಸಲು ನಡೆಯುತ್ತಿರುವ ಸಭೆ. ಸ್ಥಳೀಯವಾಗಿ ಸಿದ್ದು, ಡಿಕೆಶಿ ಬಣಗಳ ನಡುವೆ ಆಕ್ಟಿವ್ ಆಗಿವೆ. ಇದರಿಂದ ಮುಂದಿನ ಚುನಾವಣೆ ಎಫೆಕ್ಟ್ ಆಗುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿಯೇ ಎಲೆಕ್ಷನ್ ಗೆ ಹೋಗುವ ಮುನ್ನವೇ ಸಮನ್ವಯ ಮೂಡಿಸುವ ಪ್ರಯತ್ನ.

ಪ್ರತಿ ಬಾರಿಯೂ ಜಿಲ್ಲಾ ಸಮಿತಿಗಳ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿತ್ತು. ಅಧ್ಯಕ್ಷರಾದ ಪ್ರಾರಂಭದಲ್ಲೆ ಪಕ್ಷದ ಸಭೆಗಳು ಪಕ್ಷದ ಕಚೇರಿಯಲ್ಲೇ ನಡೆಯಬೇಕು ಎಂದಿದ್ದ ಡಿಕೆಶಿ, ಇದೀಗ ಸಭೆಗಳು ಖಾಸಗಿ ರೆಸಾರ್ಟ್ ಗೆ ಶಿಫ್ಟ್ ಆಗಿದೆ.

Exit mobile version