Site icon PowerTV

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಪಲ್ಟಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಪಲ್ಟಿ, ಹಲವರಿಗೆ ಗಂಭೀರ ಗಾಯ. ಕಲಬುರಗಿ ಜಿಲ್ಲೆ ಶಹಾಬಾದ್ ಪಟ್ಟಣ ಹೊರವಲಯದ ಕಾಗಿಣಾ ನದಿ ಸೇತುವೆ ಬಳಿ ಘಟನೆ ನಡೆದಿದೆ.

ಜೇವರ್ಗಿ ಪಟ್ಟಣದಿಂದ ಚಿತ್ತಾಪುರ ಪಟ್ಟಣಕ್ಕೆ ಹೊರಟಿದ್ದ ಸರ್ಕಾರಿ ಬಸ್, ಬಸ್‌ನ ಎಕ್ಸೆಲ್ ಕಟ್ ಆಗಿ ರಸ್ತೆ ಬದಿ ತಗ್ಗುಗುಂಡಿಗೆ ಪಲ್ಟಿಯಾದ ಬಸ್. ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ. ಸೇತುವೆ ತಡೆಗೋಡೆ ಸುರಕ್ಷತೆ ಇಲ್ಲದ ಹಿನ್ನಲೆ ಚಲಿಸುವ ಬಸ್ ಪಲ್ಟಿಯಾಗಿದೆ.

ಸ್ಥಳಕ್ಕೆ ಶಹಬಾದ್ ಪೋಲೀಸರ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಪ್ರಯಾಣಿಕರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು.

Exit mobile version