Site icon PowerTV

ಏರ್ ಟೆಂಪರೇಚರ್ ಬ್ಲಾಸ್ಟ್ ಆಗಿ ಸ್ಥಳದಲ್ಲೇ ವ್ಯಕ್ತಿ ಸಾವು.!

ಹೊಸಕೋಟೆ; ಪಂಚರ್ ಶಾಪ್ ಅಲ್ಲಿ ಏರ್ ಟೆಂಪರೇಚರ್ ಬ್ಲಾಸ್ಟ್ ಆಗಿ ಸ್ಥಳದಲ್ಲೇ ವ್ಯಕ್ತಿ ಸಾವಿಗೀಡಾದ ಘಟನೆ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ನಡೆದಿದೆ.

ಮೂಲತಃ ಕೋಲಾರ ಜಿಲ್ಲೆಯ ಕ್ಯಾಲನೂರು ಮೂಲದ ಅಲ್ಲಾಬಕಾಶ್ (66) ಮೃತ ವ್ಯಕ್ತಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ಇಂದು ಸಹ ಬೆಳಿಗ್ಗೆ ಎಂದಿನಂತೆ ಪಂಚರ್ ಹಾಕಿ ನಂತರ ಏರ್ ಟೆಂಪರೇಚರ್ ಸ್ವಿಚ್ ಹಾಕಿದಾಗ ಪಂಚರ್ ಶಾಪ್ ನಲ್ಲಿ ಏರ್ ಟೆಂಪರೇಚರ್ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ.

ಸುಮಾರು 5 ವರ್ಷಗಳಿಂದ ಪಂಚರ್ ಶಾಪ್ ಇಟ್ಟಿಕೊಂಡು ಮೃತ ವ್ಯಕ್ತಿ ಜೀವನ ಸಾಗಿಸುತ್ತಿದ್ದ. ಪ್ರತಿನಿತ್ಯ ಅಂಗಡಿಯಲ್ಲಿ ಮಲಗಿ ಬೆಳಗ್ಗೆ ಎಂದಿನಂತೆ ಕೆಲಸ ಮಾಡುತ್ತಿದ್ದ. ಇಂದು ಸಹ ಬೆಳಿಗ್ಗೆ ಎಂದಿನಂತೆ ಪಂಚರ್ ಹಾಕಿ ನಂತರ ಏರ್ ಟೆಂಪರೇಚರ್ ಸ್ವಿಚ್ ಹಾಕಿದಾಗ ಈ ಘಟನೆ ನಡೆದಿದೆ.

ಏರ್ ಟೆಂಪರೇಚರ್ ಒಮ್ಮೆಲೇ ಓವರ್ ಲೋಡ್ ಹಾಗಿ ಬ್ಲಾಸ್ಟ್ ಅದ ಕಾರಣ ಸ್ಥಳದಲ್ಲೇ ವ್ಯಕ್ತಿ ದೇಹ ಛಿದ್ರವಾಗಿದೆ. ಮೃತ ವ್ಯಕ್ತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬ ಗಂಡು ಮಗ ಇದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Exit mobile version