Site icon PowerTV

ಪಟಾಕಿ ಅವಘಡ: 40ಕ್ಕೂ ಹೆಚ್ಚು ಪ್ರಕರಣ ವರದಿ

ದೀಪಾವಳಿ ಮುಗಿದರೂ ರಾಜಧಾನಿಯಲ್ಲಿ ಪಟಾಕಿ ಅವಘಡಗಳು ನಿಂತಿಲ್ಲ. ದೀಪಾವಳಿ ಮುಗಿದಿದ್ದರೂ ಈವರಗೆ ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮೂರು ವರ್ಷದ ಅವಧಿಯಲ್ಲಿಈ ವರ್ಷ ಗರಿಷ್ಠ ಪ್ರಕರಣಗಳು ವರದಿಯಾಗಿವೆ. ಪಟಾಕಿ ಬಗ್ಗೆ ಜಾಗೃತಿ ಮೂಡಿಸಿದರು ಪಟಾಕಿ ಅವಘಡಗಳು ನಿಲ್ಲುತ್ತಿಲ್ಲ. ಕೆಲವರ ಕಣ್ಣಿಗೆ ಗಂಭೀರ ಹಾನಿಯಾಗಿದ್ದು, ದೃಷ್ಟಿಯನ್ನು ಕಳೆದುಕೊಳ್ಳುವಂತಹ ಘಟನೆಗಳು ವರದಿಯಾಗಿದೆ .

ಇನ್ನು, ಈ ಬಾರಿ 5 ಮಂದಿ ಕಣ್ಣಿಗೆ ಗಂಭೀರ ಗಾಯಗಳಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಪೈಕಿ 18 ಮಂದಿಗೆ ಗಂಭೀರ ಗಾಯವಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಮಾಹಿತಿ ನೀಡಿದ್ದಾರೆ.

Exit mobile version