Site icon PowerTV

ಕೇಸ್​ ಮುಗಿಯೋವರೆಗೂ ಕ್ರಿಕೆಟಿಗ​ ಸಂದೀಪ್ ಲಮಿಚಾನೆ ನ್ಯಾಯಾಂಗ ಬಂಧನ.!

ನವದೆಹಲಿ: ನೇಪಾಳಿ ಕ್ರಿಕೆಟಿಗ ಲಮಿಚಾನೆ ಅತ್ಯಾಚಾರ ಆರೋಪದ ಅಂತಿಮ ತೀರ್ಪಿನವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನೇಪಾಳದ ಸ್ಟಾರ್ ಕ್ರಿಕೆಟಿಗ ಹಾಗೂ ಮಾಜಿ ನಾಯಕ ಸಂದೀಪ್ ಲಮಿಚಾನೆ ವಿರುದ್ಧದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ಅಂತಿಮ ವಿಚಾರಣೆಯವರೆಗೆ ನ್ಯಾಯಾಂಗ ಬಂಧನಕ್ಕೆ ಕಠ್ಮಂಡು ಜಿಲ್ಲಾ ನ್ಯಾಯಾಲಯ  ನೀಡಿ ಆದೇಶಿಸಿದೆ.

ಆತನ ವಿರುದ್ಧ ದಾಖಲಾಗಿರುವ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಲಮಿಚಾನೆಯನ್ನು ಕಸ್ಟಡಿಗೆ  ಒಪ್ಪಿಸಲು ಕಠ್ಮಂಡು ನ್ಯಾಯಾಲಯ ತೀರ್ಪು ನೀಡಿದೆ. ನೇಪಾಳಿ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ.

ಪೊಲೀಸರು ಬಂಧನ ಮಾಡಿ ನ್ಯಾಯಾಲಯಕ್ಕೆ ವಿಚಾರಣೆಗೆ ನೀಡಿ ಎಂದು ಹೇಳಿತ್ತು. ಆಗ ಪೊಲೀಸ್​ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಈಗ ಮತ್ತೆ ಜಾಮೀನು ಅರ್ಜಿ ಹಾಕಿದ ಹಿನ್ನಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.

ತೀರ್ಪು ಬಂದ ನಂತರ ಕಠ್ಮಂಡುವಿನ ಜಿಲ್ಲಾ ಪೊಲೀಸ್ ರೇಂಜ್‌ನ ಪೊಲೀಸ್ ವರಿಷ್ಠಾಧಿಕಾರಿ ಸುಂದರ ಮಾತನಾಡಿ, ಸ್ಟಾರ್ ಕ್ರಿಕೆಟಿಗನನ್ನು ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗುವುದು ಎಂದರು.

Exit mobile version