Site icon PowerTV

ಲಂಚ ಕೊಡದಿದ್ದಕ್ಕೆ ಬಾರ್‌ ಮಾಲೀಕನಿಗೆ ಅಬಕಾರಿ ಇನ್ಸ್‌ಪೆಕ್ಟರ್‌ ಆವಾಜ್‌

ವಿಜಯಪುರ: ಲಂಚ ಕೊಡದಿದ್ದಕ್ಕೆ ಬಾರ್‌ ಮಾಲೀಕನಿಗೆ ಅಬಕಾರಿ ಇನ್ಸ್‌ಪೆಕ್ಟರ್‌ ಆವಾಜ್‌ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಡಿಸಿಗೆ ಕೊಟ್ಟಿದ್ದೀರಾ, ಜೆಸಿಗೆ ಕೊಟ್ಟಿದ್ದೀರಾ ನಮಗ್ಯಾಕೆ ಕೊಡಲ್ಲ. ಕೊಡೋದು ಕೊಡಿ, ಇಲ್ಲದಿದ್ರೆ ಚೆನ್ನಾಗಿರಲ್ಲ‌ ಎಂದು ಲೇಡಿ ಇನ್ಸ್‌ಪೆಕ್ಟರ್‌ ಧಮ್ಕಿ ಹಾಕಿದ್ದಾರೆ.

ಇನ್ನು, ಜೂನ್, ಜುಲೈ ತಿಂಗಳದ್ದು ಬಾಕಿ‌ ಉಳಿದಿದೆ ಕೊಡಬೇಕು ಎಂದು ವಾರ್ನಿಂಗ್‌ ಮಾಡಿದ್ದು, ಆಯ್ತು ಮೇಡಂ ತಂದು ಕೊಡ್ತಿವಿ ಎಂದು ಒಪ್ಪಿಕೊಂಡ ಬಾರ್ ಮಾಲೀಕ. ಒಂದೊಂದು ಬಾರ್‌ಗೆ 15 ಸಾವಿರದಂತೆ ಕೊಡಿ ಎಂದು ರೇಟ್‌ ಫಿಕ್ಸ್‌ ಮಾಡಿದ್ದು, ಖುಲ್ಲಂ ಖುಲ್ಲಾ ಲಂಚಕ್ಕೆ ಬೇಡಿಕೆ ಇಟ್ರೂ ಸುಮ್ಮನಿರುವ ಸರ್ಕಾರ, ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಫುಲ್‌ ವೈರಲ್‌ ಆಗಿದೆ.

Exit mobile version