Site icon PowerTV

ಕಾಂಗ್ರೆಸ್​ನಿಂದ ಡೈವರ್ಸ್ ತಗೊಂಡು ಬಂದಾಗಿದೆ, ಮರಳಿ ಹೋಗೋ ಮಾತಿಲ್ಲ; ಬಿಸಿ ಪಾಟೀಲ್​​​

ಬೆಂಗಳೂರು: ಕಾಂಗ್ರೆಸ್ ಬರುವವರಿಗೆ ನಿನ್ನೆ ರಾಜ್ಯ ಕಾಂಗ್ರೆಸ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಡಿ.ಕೆ ಶಿವಕುಮಾರ್ ಅವರು ಆಹ್ವಾನ ವಿಚಾರಕ್ಕಾಗಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ಗೆ ಹೋಗುವ ಜರೂರತ್ ನಮಗಿಲ್ಲ. ಈಗಾಗಲೇ ಡೈವರ್ಸ್ ತಗೊಂಡ್ ಬಂದಾಗಿದೆ. ಹೊಡೆದ ಹಾಲು ಮತ್ತೆ ಕೂಡಲ್ಲ. ಅದೇ ರೀತಿ ನಾವೂ ಕೂಡ ಮತ್ತೆ ಕಾಂಗ್ರೆಸ್​ಗೆ ಹೋಗೋ ಮಾತೇ ಇಲ್ಲ ಎಂದರು.

ಇನ್ನು ಕಾಂಗ್ರೆಸ್​ನವರಿಗೆ ವಿಧಾನಸಭಾ ಚುನಾವಣೆಗೆ ಕ್ಯಾಂಡಿಡೇಟ್ ಇಲ್ಲ. ಹಾಗಾಗಿ ಕರೆಯುತ್ತಿರಬೇಕು ಅಷ್ಟೇ. ನಾವ್ಯಾರೂ ಕಾಂಗ್ರೆಸ್‌ಗೆ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಂತೆಯೇ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ನಾವು ಯಾವ ಕ್ಯಾಂಡಿಡೇಟ್ ಅಲ್ಲ. ನಮ್ಮ ನಿರ್ಣಯದಲ್ಲಿ ಬದಲಾವಣೆ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ, ಒಗ್ಗಟ್ಟಾಗಿ ಇರ್ತೇವೆ. ಎಲ್ಲರ ಅಭಿಪ್ರಾಯವೇ ನಮ್ಮ ಅಭಿಪ್ರಾಯ. ನಾವು ಕಾಂಗ್ರೆಸ್​ಗೆ ಯಾವುದೇ ಕಾರಣಕ್ಕೂ ಹೋಗೊದಿಲ್ಲ ಎಂದರು.

Exit mobile version