Site icon PowerTV

ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳು ವಶಕ್ಕೆ

ಕಲಬುರಗಿ : ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿದ ಪ್ರಕರಣವನ್ನು ಆಳಂದ ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ.

ನವೆಂಬರ್​​​​ 1ರಂದು ಮಧ್ಯಾಹ್ನ ಬಾಲಕಿಯ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಭೇದಿಸಲು ಕಲಬುರಗಿ SP ಇಶಾ ಪಂತ್ ವಿಶೇಷ ತಂಡವನ್ನು ರಚಿಸಿದರು. ಈ ವಿಶೇಷ ತಂಡ ಕೆಲ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಬಾಲಕಿ ವಾಸವಿದ್ದ ಗ್ರಾಮದ 16 ವರ್ಷದ ಬಾಲಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಸದ್ಯ ಕೃತ್ಯ ನಡೆಸಿದ ಆರೋಪಿಯನ್ನು ಆಳಂದ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಗ್ರಾಮದಲ್ಲಿಯೇ ಇದ್ದ 17 ವರ್ಷದ ಬಾಲಕನೇ, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಬಾಲಕಿಯನ್ನು ಹತ್ಯೆ ಮಾಡಿದವರನ್ನು ಬಂಧಿಸುವಂತೆ ಯುವಕರ ಗುಂಪು ಪ್ರತಿಭಟನೆಯನ್ನು ಮಾಡಿತ್ತು. SP ಇಶಾ ಪಂತ್ ಪ್ರಕರಣ ಭೇದಿಸಿದ ಸಿಬ್ಬಂದಿಗೆ 1 ರೂ ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನೂ ಶೀಘ್ರದಲ್ಲೇ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಫಿದಾ ಆಗಿದ್ದು, ಅಭಿನಂದನೆ ತಿಳಿಸುತ್ತಿದ್ದಾರೆ.

Exit mobile version