Site icon PowerTV

ಪೊಲೀಸರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ ರೌಡಿ ಅಂದರ್

ಬೆಂಗಳೂರು: ಪೊಲೀಸರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ ರೌಡಿ ಅಂದರ್. ಚೆನ್ನಮ್ಮನಕೆರೆ ಪೊಲೀಸರಿಂದ ರೌಡಿ ಗೊಣ್ಣೆ ವಿಜಿ ಅರೆಸ್ಟ್.

ಕಳೆದ ವಾರ ಹೊಯ್ಸಳದ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಎರಚಿದ್ದ ವಿಜಿ. ಗಿರಿನಗರ ಕಾನ್ಸ್ ಟೇಬಲ್ ಗಳಾದ ನಾಗೇಂದ್ರ,ಕಿರಣ್ ಹಾಗೂ ನೇತ್ರಾ ಎಂಬುವರ ಮೇಲೆ ಸ್ಪ್ರೇ ಎರಚಿದ್ದ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಪೊಲೀಸರ ಮೇಲೆ ಸ್ಪ್ರೇ ಎರಚಿದ್ದ‌.

ಇದೀಗ ತಮಿಳುನಾಡಿನಿಂದ ಆರೋಪಿಯನ್ನ ಬಂಧಿಸಿ ಕರೆತರಲಾಗಿದೆ. ಗೊಣ್ಣೆ ವಿಜಿ ಮೇಲೆ ಈ ಹಿಂದೆ ಕೊಲೆಯತ್ನ,ದರೋಡೆ,ಸುಲಿಗೆಯಂತಹ ಪ್ರಕರಣ ದಾಖಲಾಗಿದ್ದವು. ಇತ್ತೀಚಿಗೆ ರಾಮನಗರ ಭಾಗದಲ್ಲಿ ದರೋಡೆ ಪ್ರಕರಣವೊಂದರಲ್ಲೂ ಬೇಕಾಗಿದ್ದ ವಿಜಿ.ರಾಮನಗರ ದರೋಡೆ ಪ್ರಕರಣದಲ್ಲಿ ವಿಜಿಯ ಸಹಚರರಾದ ರೇಣುಕುಮಾರ್ @ ಟಾಂಗು ಹಾಗೂ ಕಿರಣ್ @ ಡಚ್ಚಿ ಅರೆಸ್ಟ್ ಆಗಿದ್ದರು.ಸದ್ಯ ಚೆನ್ನಮ್ಮನಕೆರೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

 

Exit mobile version