Site icon PowerTV

ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಗುರಿಯಾಗಿಸಿ ಗುಂಡಿನ ದಾಳಿ.!

ಪಾಕಿಸ್ತಾನ: ಪಾಕಿಸ್ತಾನ​ ಮಾಜಿ ಪ್ರಧಾನಿ ಇಮ್ರಾನ್ ಅವರ ಸಮೀಪದಲ್ಲಿಯೇ ಇಂದು ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಇಮ್ರಾನ್​ ಖಾನ್​ ಕಾಲಿಗೆ ಗುಂಡು ತಗಲಿದೆ ಎಂದು ವರದಿಯಾಗಿವೆ.

ಪಾಕಿಸ್ತಾನದ ವಜೀರಾಬಾದ್​​ನಲ್ಲಿ ಇಮ್ರಾನ್​ ಖಾನ್​ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಯಲ್ಲಿ ಹಲವರಿಗೆ ಗಾಯಗೊಂಡಿದ್ದಾರೆ. ಇಮ್ರಾನ್​ ಖಾನ್​ ಗುರಿಯಾಗಿಸಿ ಈ ಗುಂಡಿನ ದಾಳಿ ನಡೆದಿದೆ ಎನ್ನಲಾಗಿತ್ತು. ಈ ಘಟನೆಯಲ್ಲಿ ಪಾಕ್​ ಮಾಜಿ ಪ್ರಧಾನಿ ಕಾಲಿಗೆ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಸದ್ಯ ಇಮ್ರಾನ್​ ಖಾನ್​ ಬಲಗಾಲಿಗೆ ಬ್ಯಾಂಡೇಜ್‌ ಹಾಕಲಾಗಿದ್ದು, ಎಸ್‌ಯುವಿ ವಾಹನಕ್ಕೆ ಸ್ಥಳಾಂತರಿಸಲಾಗಿದೆ. ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧದ “ಲಾಂಗ್ ಮಾರ್ಚ್” ಭಾಗವಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಟ್ರಕ್ ಮೇಲೆ ನಿಂತಿದ್ದಾಗ ಬಂಧಿಸಲ್ಪಟ್ಟಿರುವ ಶೂಟರ್ ಗುಂಡು ಹಾರಿಸಿದ್ದಾನೆ.

ಇದು ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡುವ ರಾಜಕೀಯ ಸಂಚು ಎಂದು ಆರೋಪಿಸಲಾಗಿದೆ. ಈ ಘಟನೆ ಬಳಿಕ ಉಂಟಾದ ಉದ್ವಿಗ್ನ ವಾತಾವರಣ, ಗಾಯಾಳುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Exit mobile version