Site icon PowerTV

ಒಂದೇ ವಾರದಲ್ಲಿ ಇಬ್ಬರು ಕನ್ನಡಿಗರಿಗೆ ರಜನಿ ಚಿನ್ನದ ಸರ

ಕನ್ನಡ ಮಣ್ಣಿನಲ್ಲೆ ಹುಟ್ಟಿ ಬೆಳೆದ ಹೆಸರಾಂತ ಕಲಾವಿದ ರಜನಿಕಾಂತ್​​. ಬಸ್​ ಕಂಡಕ್ಟರ್​​ ಆಗಿದ್ದ ರಜನಿ ಇದೀಗ ತಮಿಳುನಾಡಿನ ಸೂಪರ್​ ಸ್ಟಾರ್​ ನಟ. ಹೆಸರಿಗೆ ತಮಿಳುನಾಡಿನವಾದ್ರೂ, ಕರ್ನಾಟಕ ಅಂದ್ರೆ ರಜನಿಗೆ ಉಸಿರು. ಇದೀಗ ಒಂದೇ ವಾರದಲ್ಲಿ ರಜನಿ ಇಬ್ಬರು ಕನ್ನಡದ ಕಲಾತಪಸ್ವಿಗಳಿಗೆ ಚಿನ್ನದ ಸರ ತೊಡಿಸಿ, ಕನ್ನಡ ಪ್ರೇಮ ಮೆರೆದಿದ್ದಾರೆ. ಯೆಸ್​​​.. ಏನಿದು ಇಂಟ್ರೆಸ್ಟಿಂಗ್​ ಸ್ಟೋರಿ ಆಂತೀರಾ..? ನೀವೇ ಓದಿ.

ಕಾಲಿವುಡ್​ ಸೂಪರ್ ಸ್ಟಾರ್​​ ರಜನಿಕಾಂತ್​​ ಕೋಟ್ಯಾನು ಕೋಟಿ ಅಭಿಮಾನಿಗಳ ಮೆಚ್ಚಿನ ನಟ. ರಜನಿ ಬರ್ತಾರೆ ಅಂದ್ರೆ ಅಲ್ಲಿ ಜನಸಾಗರವೇ ಸೇರುತ್ತೆ. ಆದ್ರೇ, ಈ ಬಾರಿ ರಜನಿಗೋಸ್ಕರ ಜನ ಸೇರಿರಲಿಲ್ಲ. ಮತ್ತೊಬ್ಬ ದೇವತಾ ಮನುಷ್ಯನ ಅಪರೂಪದ ಸಡಗರವನ್ನು ಕಣ್ತುಂಬಿಕೊಳ್ಳೋಕೆ ವಿಧಾನ ಸೌಧದ ಮುಂದೆ ನೆರೆದಿದ್ರು. ಈ ಬಾರಿ ಒಂದೇ ವಾರದಲ್ಲಿ ರಜನಿ ಕನ್ನಡದ ಮುಕುಟ ಮಣಿಗಳ ಕೊರಳಿಗೆ ಚಿನ್ನದ ಸರ ಹಾಕಿ ಕನ್ನಡಿಗರ ಮನೆ ಮಗನಾಗಿದ್ದಾರೆ.

ಯೆಸ್​​.. ತಲೈವಾ, ಕಾಂತಾರ ಸಿನಿಮಾ ಮೆಚ್ಚಿ ಪ್ರಶಂಸೆಯ ಮಾತನ್ನಾಡಿದ್ರು. ರಿಷಬ್​ ರೈಟಿಂಗ್​ ಹಾಗೂ ಆ್ಯಕ್ಟಿಂಗ್​​ಗೆ ಹ್ಯಾಟ್ಸ್​​ ಆಫ್​ ಹೇಳಿದ್ರು. ಇದಾದ ನಂತ್ರ ತಲೈವಾ ಭೇಟಿ ಮಾಡಿದ್ದ ರಿಷಬ್​ ಕಾಲಿಗೆ ಬಿದ್ದು ಅಸಮಾನ್ಯ ಕಲಾವಿದ ರಜನಿಕಾಂತ್​​ ಆಶೀರ್ವಾದ ಪಡೆದಿದ್ರು. ಜತೆಗೆ ರಿಷಬ್​​ ಶಾಲು ಹೊದಿಸಿ ಸನ್ಮಾನ ಮಾಡಿದ್ದಲ್ಲದೆ ಕೆಲವು ಟಿಪ್ಸ್​ ಕೂಡ ಕೊಟ್ಟಿದ್ರು.

ಕನ್ನಡ ಕಲಾವಿದರಿಗೆ ತಲೈವಾ ಮನಸಾರೆ ಹಾರೈಸ್ತಾ ಇರೋದಕ್ಕೆ ಕರುನಾಡಿನ ಜನತೆ ಫಿದಾ ಆಗಿದ್ದಾರೆ. ಈ ಪ್ರೀತಿಯ ಪರಿ ಕಂಡು ಕ್ಲೀನ್​ ಬೋಲ್ಡ್ ಆಗಿದ್ದಾರೆ. ಇದ್ರ ಜತೆಗೆ ಕರುನಾಡಿನ ಕಳಸ ಅಪ್ಪು ಅವರಿಗೆ ಕರ್ನಾಟಕ ರತ್ನ ನೀಡೋಕೆ ಬಂದ ರಜನಿ ಅಭಿಮಾನ, ವಿಶ್ವಾಸ ಕಂಡು ಚಿತ್ರ ಪ್ರೇಮಿಗಳು ಕರಗಿ ಹೋಗಿದ್ದಾರೆ. ಅಪ್ಪುಗೂ ಚಿನ್ನದ ಸರ ತೊಡಿಸಿದ ರಜನಿ ಮನಸ್ಸು ಬಿಚ್ಚಿ ಮಾತನ್ನಾಡಿದ್ದಾರೆ.

ಇಡೀ ವಿಶ್ವದಾದ್ಯಂತ ರಜನಿಕಾಂತ್​​ ಅಭಿಮಾನಿಗಳಿದ್ದಾರೆ. ಆದ್ರೆ ರಜನಿ ಮಾತ್ರ ದೊಡ್ಮನೆಗೆ ಋಣಿಯಾಗಿ, ಅಪ್ಪು ಅಭಿಮಾನಿಯಾಗಿ, ಅಣ್ಣಾವ್ರ ಪ್ರೇಮಿಯಾಗಿ ಕನ್ನಡ ನೆಲದಲ್ಲಿ ಪರಮಾತ್ಮನಿಗೆ ಚಿನ್ನದ ಸರ ತೊಡಿಸಿದ್ದು ಹೆಮ್ಮೆಯ ವಿಷಯವಾಯಿತು. ಎನಿವೇ, ರಜನಿ ಕನ್ನಡ ನಂಟು ಹೀಗೆ ಮುಂದುವರೆಯಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

Exit mobile version