Site icon PowerTV

ನಕಲಿ ಕೀ ಬಳಸಿ ಫೋಟೊ ಸ್ಟೋಡಿಯೋಗೆ ಕನ್ನ

ಕಲಬುರಗಿ:ನಕಲಿ ಕೀ ಬಳಸಿ ಫೋಟೊ ಸ್ಟೋಡಿಯೋಗೆ ಕನ್ನ ಹಾಕಿ 3 ಫೋಟೊ ಕ್ಯಾಮರಾ ಮತ್ತು ಒಂದು ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೋದಂತಹ ಘಟನೆ ಕಲಬುರಗಿ ಜಿಲ್ಲೆ ಆಳಂದ ಪಟ್ಟಣದ ಎಸ್‌ಬಿಐ ಬ್ಯಾಂಕ್ ಬಳಿಯ ಫೋಟೊ ಸ್ಟೋರಿಯೊದಲ್ಲಿ ನಡೆದಿದೆ.‌

ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿರೋ ಬಿ.ಕೆ ಫೋಟೊ ಸ್ಟೋಡಿಯೋದಲ್ಲಿ ಘಟನೆ ನಡೆದಿದೆ. ಸಂತೋಷ್ ಎಂಬುವರಿಗೆ ಸೇರಿರೋ ಫೋಟೋ ಸ್ಟೋಡೊಯೋದಲ್ಲಿ, ನೆನ್ನೆ ತಡರಾತ್ರಿ ನಕಲಿ‌ ಕೀ ಬಳಸಿ ಕಳ್ಳತನ ಮಾಡಿದ ಖಧೀಮರು. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು. 3 ಡಿಜಿಟಲ್ ಕ್ಯಾಮೆರಾ, 1 ಲ್ಯಾಪ್‌ಟಾಪ್ ಹಾಗೂ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು, ಖಧೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ಇನ್ನೂ ಆಳಂದ ಪಟ್ಟಣದಲ್ಲಿ ನಿರತರವಾಗಿ ಕಳ್ಳತನ ನಡೆಯುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು/ವ್ಯಾಪಾರಸ್ಥರು ಆಗ್ರಹಿಸಿದ್ದಾರೆ..

Exit mobile version