Site icon PowerTV

ಸಾವಿನಲ್ಲೂ ಒಂದಾದ ಪತಿ,ಪತ್ನಿ

ಕೊಪ್ಪಳ : ಪತ್ನಿ ಸಾವಿನ ಬಳಿಕ ಪತಿ ಸಾವನ್ನಪ್ಪಿದ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ.

ಪತ್ನಿ ಸಾವನ್ನಪ್ಪಿದ ಮೂರು ಗಂಟೆಯಲ್ಲಿಯೇ ಪತಿ ಸಾವನ್ನಪ್ಪಿದ್ದಾರೆ. ಮೊದಲು ಪತ್ನಿ ಹೊನ್ನಮ್ಮ ತಳವಾರ್ (56) ಸಾವನ್ನಪ್ಪಿದ್ದು, ಬಳಿಕ ಪತಿ ಶಿವಪ್ಪ ತಳವಾರ್ (65) ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಸಾವನ್ನಪ್ಪಿದ ಪತ್ನಿ ಹೊನ್ನಮ್ಮ, ಪತ್ನಿ ಸಾವಿನ ಬಳಿಕ ಹೃದಯಾಘಾತದಿಂದ ಹೊನ್ನಪ್ಪ ಸಾವನ್ನಪ್ಪಿದ್ದಾರೆ. ಅನ್ಯೋನ್ಯದಿಂದ ಜೀವನ ಸಾಗಿಸಿದ್ದ ಶಿವಪ್ಪ,ಹೊನ್ನಮ್ಮ, ಪತಿ, ಪತ್ನಿಯ ಅಂತ್ಯಸಂಸ್ಕಾರವನ್ನು, ಗ್ರಾಮಸ್ಥರು ಜೊತೆಯಲ್ಲಿಯೇ ಮಾಡಲಿದ್ದಾರೆ.

Exit mobile version