Site icon PowerTV

ಅಕ್ರಮ ಮಣ್ಣು ಸಾಗಿಸುವ ವೇಳೆ ಟ್ರಾಕ್ಟರ್ ಚಾಲಕ ಸ್ಥಳದಲ್ಲೇ ಸಾವು

ಗದಗ: ಮಣ್ಣಿನ ಟ್ರಾಕ್ಟರ್ ಪಲ್ಟಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಕ್ರಮ ಮಣ್ಣು ಸಾಗಿಸಲು ಹೋಗಿ ಯುವಕ ಜೀವ ಕಳೆದುಕೊಂಡ ಘಟನೆ ನಡೆದಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ- ಯಳವತ್ತಿ ಮಾರ್ಗ ಮಧ್ಯ ಘಟನೆ ನಡೆದಿದ್ದು, ಈರಪ್ಪ ದೊಡ್ಡೆಕಲ್ (೨೬) ಮೃತ ದುರ್ದೈವಿ.

ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಮೂಲದ ಮೃತ ಯುವಕ, ಅಕ್ರಮ ಮಣ್ಣು ಸಾಗಿಸುತ್ತಿದ್ದ ವೇಳೆ ನಡೆದ ದುರ್ಘಟನೆ.
ಅಧಿಕಾರಿಗಳ ಭಯಕ್ಕೆ ಕಳ್ಳ ಮಾರ್ಗದಿಂದ‌ ಮಣ್ಣು ಸಾಗಾಟ. ಗ್ರಾಮೀಣ ಕಚ್ಚಾ ರಸ್ತೆ ಹೋಗುವ ವೇಳೆ ಗುಂಡಿಗೆ ಬಿದ್ದು ಟ್ರ್ಯಾಕ್ಟರ್ ಪಲ್ಟಿ

Exit mobile version