Site icon PowerTV

ಮೆಣಸಿನಕಾಯಿ ಬೆಳೆ ಹಾಳು ಮಾಡಿದ ರೈತ

ಧಾರವಾಡ : ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತನೊಬ್ಬ ತಾನು ಬೆಳೆದ ಮೆಣಸಿನಕಾಯಿ ಬೆಳೆಯನ್ನು ನಾಶಗೊಳಿಸಿದ್ದಾನೆ.

ಬೆಳೆಗೆ ಸರಿಯಾದ ಬೆಲೆ ಸಿಗದೆ ನೊಂದು ತನ್ನ ಜಮೀನಿನಲ್ಲಿ ಇರುವ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ್ದಾನೆ. ಜೈಪಾಲ ಯೋಗಪ್ಪನವರ ಎಂಬುವವರು ಮೂರು ಎಕರೆಯಲ್ಲಿ ಬೆಳೆದ ಮೆಣಸಿನಕಾಯಿಯನ್ನು ಟ್ರ್ಯಾಕ್ಟರ್ ಮೂಲಕ ಅವರೇ ನಾಶ ಮಾಡಿದ್ದಾರೆ.

ಇದು ಇವರೊಬ್ಬರ ಕಥೆಯಲ್ಲ, ಬೆಳೆ ಹಾನಿಯಿಂದ ಕಂಗೆಟ್ಟಿರುವ ಹಲವು ರೈತರ ಕಥೆ. ಸಾಲ-ಸೂಲ ಮಾಡಿ ತಾವೇ ಬೆಳೆದ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಅಕಾಲಿಕ ಮಳೆಗೆ ಹಾಳಾಗಿದ್ದ ಮೆಣಸಿನಕಾಯಿ ಬೆಳೆಯಲ್ಲಿ ಇದೀಗ ಅಳಿದುಳಿದ ಮೆಣಸಿನಕಾಯಿಗೂ ಬೆಲೆ ಇಲ್ಲದೆ ಇರುವುದರಿಂದ ರೈತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

Exit mobile version