Site icon PowerTV

ಅಪ್ಪು ‘ಗಂಧದ ಗುಡಿ’ ಸಿನಿಮಾ ವೀಕ್ಷಿಸಿದ ಬಿಎಸ್​ ಯಡಿಯೂರಪ್ಪ

ಶಿವಮೊಗ್ಗ; ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ನಗರದ ಮೀನಾಕ್ಷಿ ಭವನ್ ನಲ್ಲಿ ದೋಸೆ ಸವಿದ ಬಳಿಕ ಅಪ್ಪು ಕೊನೆಯ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಪುತ್ರ, ಸಂಸದ ಬಿ.ವೈ ರಾಘವೇಂದ್ರ, ಸೊಸೆ ತೇಜಸ್ವಿನಿ ರಾಘವೇಂದ್ರ ಸೇರಿದಂತೆ ಆಪ್ತರೊಂದಿಗೆ ಗಂಧದ ಗುಡಿ ಸಿನಿಮಾ ವೀಕ್ಷಣೆ ಮಾಡಿದ್ದು, ಬಹಳ ವರ್ಷಗಳ ಬಳಿಕ ಯಡಿಯೂರಪ್ಪ ಅವರು ಥಿಯೇಟರ್ ಗೆ ತೆರಳಿ ರಾಜಕೀಯ ಜಂಜಾಟ ಮರೆತು ಸಿನಿಮಾ ವೀಕ್ಷಿಸಿದ್ದಾರೆ.

ಶಿವಮೊಗ್ಗ ನಗರದ ಸಿಟಿ ಸೆಂಟರ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ ನಲ್ಲಿ ದಿ. ಪುನೀತ್ ರಾಜ್‍ಕುಮಾರ್ ಅವರ ಮಹತ್ವಕಾಂಕ್ಷೆಯ ಕೊನೆಯ ಸಿನಿಮಾ ಗಂಧದಗುಡಿ ವೀಕ್ಷಣೆ ಮಾಡಿದ್ದು, ಅಪ್ಪು ಮೇಲಿನ ಅವರ ಅಭಿಮಾನ ವ್ಯಕ್ತಪಡಿಸಿದ್ದಾರೆ.

Exit mobile version