Site icon PowerTV

ಯಮರೂಪಿ BMTCಗೆ ಮತ್ತೊಂದು ಬಲಿ

ಬೆಂಗಳೂರು : ಬೈಕ್​ಗೆ BMTC ಬಸ್ ಡಿಕ್ಕಿ ಸ್ಥಳದಲ್ಲೇ ಸವಾರ ಸಾವನ್ನಪ್ಪಿದ ಘಟನೆ ಕಾಮಾಕ್ಷಿಪಾಳ್ಯದ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.

ತಲೆಗೆ ಪೆಟ್ಟು ಬಿದ್ದು ಪ್ರಮೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್ ಡ್ರೈವರ್ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ. ಬಿಎಂಟಿಸಿ ಚಾಲಕನಿಗೆ ಸಾರ್ವಜನಿಕರು ಥಳ್ಳಿಸಿದ್ದು, ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು, ಮರಣೋತ್ತರ ಪರೀಕ್ಷೆಗಾಗಿ K.C.ಜನರಲ್‌ ಆಸ್ಪತ್ರೆಗೆ ರವಾನಿಸಲಾಗಿದ್ದು, ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version