Site icon PowerTV

ತಮಿಳುನಾಡಿನಲ್ಲಿ ಮಳೆಯಾರ್ಭಟ

ತಮಿಳುನಾಡು : ದೇಶಾದ್ಯಂತ ಮಳೆಯಾಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿತ್ತು. ಅದರಂತೆ ಕೆಲ ರಾಜ್ಯಗಳಲ್ಲಿ ಅಧಿಕ ಮಳೆಯಾಗ್ತಿದೆ. ಕರ್ನಾಟಕದಲ್ಲೂ ಮಳೆಯಾಗ್ತಿದೆ.

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ ಮಳೆಯ ಪ್ರಮಾಣ ಕೊಂಚ ಅಧಿಕಗೊಂಡಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಎರಡು, ಮೂರು ದಿನಗಳಿಂದ ಮಳೆ ಅಧಿಕಗೊಂಡಿದೆ. ಇದ್ರಿಂದಾಗಿ ರಾಜಧಾನಿಯ ರಸ್ತೆಗಳು ಜಲಾವೃತವಾಗಿದ್ವು, ಜನ ಪರದಾಡಿದ್ರು. ಚರಂಡಿ ನೀರೆಲ್ಲ ರಸ್ತೆಯ ಮೇಲೆ ನಿಂತು ದುರ್ವಾಸನೆ ಬೀರ್ತಿದೆ. ನದಿಯಂತಾದ ರಸ್ತಯಲ್ಲೇ ವಾಹನಗಳು ಸಂಚಾರ ಮಾಡಿದ್ವು.

Exit mobile version