Site icon PowerTV

ಪೊಲೀಸ್ ಕಾನ್ಸ್‌ಟೇಬಲ್​ಗೆ ಚಾಕು ಇರಿದ ಕಿಡಿಗೇಡಿಗಳು

ಹಾಸನ:ಪೊಲೀಸ್ ಕಾನ್ಸ್‌ಟೇಬಲ್ ಚಾಕು ಇರಿದ ಕಿಡಿಗೇಡಿಗಳು. ಇನ್ನು ಲೋಹಿತ್ ಗಾಯಗೊಂಡ ಪೊಲೀಸ್ ಕಾನ್ಸ್‌ಟೇಬಲ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದ ದಾಸರಕೊಪ್ಪಲಿನಲ್ಲಿ ಘಟನೆ ನಡೆದಿದ್ದು, ಲೋಹಿತ್ ಸಕಲೇಶಪುರ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್
ಸಂಬಂಧಿಕರ ಸಾವಿಗೆ ಬಂದಿದ್ದ ಲೋಹಿತ್. ಸಾವಿನ ಮನೆಯ ಬಳಿ ಗಲಾಟೆ ಮಾಡುತ್ತಿದ್ದ ಯುವಕರು, ಈ ವೇಳೆ ಇಲ್ಲಿ ಏಕೆ‌‌ ಗಲಾಟೆ ಮಾಡುತ್ತಿದ್ದೀರಿ ಎಂದು ಬುದ್ದಿ ಹೇಳಿ ಕಳುಹಿಸಿದ್ದ ಲೋಹಿತ್.

ಕೂಡಲೇ ಸ್ಥಳದಿಂದ ತೆರಳಿದ್ದ ಯುವಕರು, ಮತ್ತೆ ಬಂದು ಕಾನ್ಸ್‌ಟೇಬಲ್ ಲೋಹಿತ್‌ಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು.
ಗಾಯಾಳು ಕಾನ್ಸ್‌ಟೇಬಲ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ.ಪ್ರಕಾಶ್, ಪುನೀತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು. ಉಳಿದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version