Site icon PowerTV

ಇನ್ವೆಸ್ಟ್ ಕರ್ನಾಟಕ ಮೀಟ್ ಮೂಲಕ ಉದ್ಯೋಗ ಸೃಷ್ಟಿ‌ ಹಾಗೂ ಹೂಡಿಕೆ ಹೆಚ್ಚಳ..!

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ ರವರು, ಕನ್ನಡ ರಾಜ್ಯೋತ್ಸವ ನಂತರ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನ‌ಡಂ ಬಾಳ್ಗೆ. ಇದು ಮೂರನೇ ಗ್ಲೋಬಲ್ ಇನ್ವೆಸ್ಟರ್ ಮೀಟ್.

ಇನ್ವೆಸ್ಟ್ ಕರ್ನಾಟಕ ಮೀಟ್ ಮೂಲಕ ಉದ್ಯೋಗ ಸೃಷ್ಟಿ‌ ಹಾಗೂ ಹೂಡಿಕೆ ಹೆಚ್ಚಳ. ವಿಶ್ವದ ಅತಿದೊಡ್ಡ ಟೆಕ್ನಾಲಜಿ ಸೆಂಟರ್ ಆಗಿ ಬೆಂಗಳೂರು ಹೊರಹೊಮ್ಮುತ್ತಿದೆ. ಒಡೆಯರ್ ಸಂಸ್ಥಾನ ಕೂಡ ಸೋಪ್, ಫ್ಯಾಕ್ಟರಿ ಸೇರಿದಂತೆ ನೂರು ವರ್ಷಗಳ ಹಿಂದೆಯೇ ಕೈಗಾರಿಕೆಗೆ ಒತ್ತು ನೀಡಿದ್ದರು. ಅಂದೇ ಕೈಗಾರಿಕೆಗೆ ಹೆಚ್ಚಿನ ಒತ್ತಯ ನೀಡಿದ್ದರು ಸರ್‌ ಎಂ. ವಿಶ್ವೇಶ್ವರಯ್ಯ. ಕೈಗಾರಿಕಾ ಬಳವಣಿಗೆಯೇ ದೇಶದ ಪ್ರಗತಿ.

ಇನ್ನು ನಮ್ಮ‌ಕಾಮನ್ ಮ್ಯಾನ್ ಸಿಎಂ ಕೂಡ ಇಂಜಿನಿಯರ್. ಹೂಡಿಕೆದಾರರು ಇಲ್ಲದೇ ಭವಿಷ್ಯ ಇಲ್ಲ ಅನ್ನೋದನ್ನ ಮನಗಂಡಿಂದ್ದಾರೆ.
ಹೂಡಿಕೆಗೆ ಸಿಎಂ‌ ಅವರು ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಉದ್ಯಮ ಸ್ನೇಹಿ ಸರ್ಕಾರದಿಂದ ಇಂಡಸ್ಟ್ರಿಯಲ್ ಲ್ಯಾಂಡ್ ಸೇರಿಸಂತೆ ಅನೇಕ ಸೌಕರ್ಯಗಳನ್ನು ನೀಡಿದೆ. ‍ರಾಜ್ಯದಲ್ಲಿ ಅತಿವೇಗದ ಸಂಪರ್ಕಕ್ಕಾಗಿ ಐದು ವಿಮಾನ ನಿಲ್ದಾಣ‌ ನಿರ್ಮಿಸಲಾಗುತ್ತಿದೆ.
ಹೂಡಿಕೆಗೆ ರಾಜ್ಯದಲ್ಲಿ ಉತ್ತಮ ಅವಕಾಶಗಳನ್ನ ನಿರ್ಮಿಸಿದೆ ಎಮದು ಹೇಳಿದರು.

Exit mobile version