Site icon PowerTV

‘ಮಂಡ್ಯ ಜಿಲ್ಲೆ ಜೆಡಿಎಸ್ ನ ಭದ್ರಕೋಟೆ‌ ಅಲ್ಲ.’!

ಮಂಡ್ಯ:ಜೆಡಿಎಸ್ ಭದ್ರ ಕೋಟೆ ಅನ್ನೋದು ಈಗಾಗಲೇ ಛಿದ್ರವಾಗಿದೆ ಎಂದು ಮದ್ದೂರಿನಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿಕೆ.

ಈ ಕುರಿತು ಮಾತನಾಡಿರುವ ಮಾಜಿ ಸಂಸದರು ಜಿಲ್ಲೆಯಲ್ಲಿ ಎರಡು ದೊಡ್ಡ ಚುನಾವಣೆ ಸೋತು ಕ್ಷೇತ್ರ ಕಳೆದುಕೊಂಡಿದ್ದಾರೆ‌.
ಜಿಲ್ಲೆಯಲ್ಲಿ ನಡೆದ ಎರಡು ಪರಿಷತ್ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಗೂಳಿಗೌಡ,ಮಧು ಮಾದೇಗೌಡ ಗೆದ್ದಿದ್ದಾರೆ. ಉಪ ಚುನಾವಣೆಯಲ್ಲಿ ನಾರಾಯಣಗೌಡ ಬಿಜೆಪಿ ಯಿಂದ ಗೆದ್ದಿದ್ದಾರೆ. ಜಿಲ್ಲೆಯ ಜನರು ಬದಲಾವಣೆ ಬಯಸುತ್ತಿದ್ದಾರೆ. ಅದಕ್ಕಾಗಿ ಜೆಡಿಎಸ್ ಗೆ ಈ ರೀತಿ ಸೋಲಾಗಿದೆ.

ಇನ್ನು ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿಲ್ಲ. ಸರ್ಕಾರ ಕೆಲಸ ಮಾಡದೆ ಇದ್ದಾಗ ಬದಲಾವಣೆ ಮಾಡಲಿಕ್ಕೆ 5 ವರ್ಷಕ್ಕೆ ಚುನಾವಣೆ ಇಟ್ಟಿದ್ದಾರೆ. ಬದಲಾವಣೆನ್ನ ನಾವು ಬಯಸುತ್ತಿಲ್ಲ, ಜನ ಬಯಸುತ್ತಿದ್ದಾರೆ. ಜೆಡಿಎಸ್ ವಿರುದ್ದ ಮಾಜಿ ಸಂಸದ LRS ವಾಗ್ದಾಳಿ.

Exit mobile version