Site icon PowerTV

ಸಹೋದರನನ್ನು ರಕ್ಷಿಸಲು ಹೋಗಿ ಮೂರು ಸಹೋದಿಯರು ನೀರುಪಾಲು

ವಿಜಯನಗರ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿಯಲ್ಲಿ, ನಾಲ್ವರು ಮಕ್ಕಳು ನೀರು ಪಾಲಾಗಿದ್ದಾರೆ.
ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿತಾಂಡದಲ್ಲಿ ದುರ್ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಳುಗುತ್ತಿರುವ ತಮ್ಮನ್ನನ್ನ ರಕ್ಷಿಸಲು ಹೋದ ಮೂರು ಜನ ಅಕ್ಕಂದಿರು ನೀರು ಪಾಲಾಗಿದ್ದಾರೆ. ಅಭಿ ವೀರ್ಯಾ ನಾಯ್ಕ (13), ಅಶ್ವಿನಿ (14), ಕಾವೇರಿ (18) ಅಪೂರ್ವಾ (18) ಸಾವನ್ನಪ್ಪಿ ಒಂದೇ ಕುಟುಂಬದ ಸದಸ್ಯರು. ಮೊದಲು ಅಭಿ‌ ನೀರಿನಲ್ಲಿ‌ ಮುಳುಗುತ್ತಿದ್ದ, ಈತನ ರಕ್ಷಣೆ ವೇಳೆಯಲ್ಲಿ ಒಬ್ಬರಾದಂತೆ ಒಬ್ಬರು ಹೋಗಿ ನೀರು ಪಾಲಾಗಿದ್ದಾರೆ. ಈಗಾಗಲೇ ಮೂರು ಶವ ಪತ್ತೆಯಾಗಿದೆ. ಇನ್ನು ಅಪೂರ್ವಾ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ. ಹೀಗಾಗಿ ಭರ್ತಿ ಆಗಿರೋ ಹೊಂಡದಲ್ಲಿ‌ ಮುಳುಗಿ ಸಾವನಪ್ಪಿರುವ ಘಟನೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version