Site icon PowerTV

ಬೆಂಗಳೂರಿನ ಕುಖ್ಯಾತ 3 ರೌಡಿಗಳು ಪೊಲೀಸರ ವಶಕ್ಕೆ

ಬೆಂಗಳೂರು: ಬೆಂಗಳೂರಿನ ಮೂವರು ಕುಖ್ಯಾತ ರೌಡಿಗಳು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿವಿಧ ಕೇಸ್​ಗಳಲ್ಲಿ ತೀವ್ರ ವಿಚಾರಣೆಗೆ ಇಂದು ಒಳಪಡಿಸಿದ್ದಾರೆ.

ಈ ಹಿಂದೆ ಜೈಲು ಸೇರಿದ್ದ ಸೈಕಲ್ ರವಿ, ಡಬಲ್ ಮೀಟರ್ ಮೋಹನ, ಹಾಗೂ ವಿಲ್ಸನ್ ಗಾರ್ಡನ್ ನಾಗ ಸೇರಿ ಕೆಲವು ಪುಡಿ ರೌಡಿಗಳು ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು.

ಇತ್ತೀಚಿಗೆ ಒಂದು ಪ್ರಕರಣದಲ್ಲಿ ಸತ್ಯನಾದನ್ ಎಂಬಾತನನ್ನ ಸಿಸಿಬಿ ಪೊಲೀಸರು ಬಂಧನ ಮಾಡಿದ್ದರು. ಈ ವೇಳೆ ಸತ್ಯನಾದನ್ ತನಗೆ ಸೈಕಲ್ ರವಿ ಪಿಸ್ತೂಲ್ ನೀಡಿರೋ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆ ಸೈಕಲ್ ರವಿ ಸಿಸಿಬಿ ವಶಕ್ಕೆ ಪಡೆಯಲಾಗಿದೆ.

ಉಳಿದಂತೆ ಬೇರೆ ಬೇರೆ ಪ್ರಕರಣಗಳಲ್ಲಿ ಡಬಲ್ ಮೀಟರ್ ಮೋಹನ ಹಾಗೂ ವಿಲ್ಸನ್ ಗಾರ್ಡನ್ ನಾಗ ವಶಕ್ಕೆ ಪಡೆದು ಮೂವರನ್ನು ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.

ಇತ್ತೀಚಿಗೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಅಣ್ಣನ ಮಗ ಕಾಣೆಯಾಗಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಗಳನ್ನ ಪೊಲೀಸರು ಬಂಧನ ಮಾಡಿ ವಿಚಾರಣೆ ಮಾಡಲಾಗುತ್ತಿದೇಯಾ ಎನ್ನಲಾಗುತ್ತಿದೆ.

Exit mobile version